ಸೈಟ್ ಕಬಳಿಸಲು ಯತ್ನ : ಐವರು ಬಿಡಿಎ ಇಂಜಿನಿಯರ್ ಗಳ ಬಂಧನ
ನಕಲಿ ದಾಖಲೆ ಸೃಷ್ಟಿಸಿ ಬಿಡಿಎ ಸೈಟ್ ಕಬಳಿಸಲು ಯತ್ನಿಸಿದ ಆರೋಪದ ಮೇಲೆ ಐವರು ಬಿಡಿಎ ಇಂಜಿನಿಯರ್ ಗಳನ್ನ ಶೇಷಾದ್ರಿಪುರಂ ಪೊಲೀಸರು ಬಂಧಿಸಿದ್ದಾರೆ.
ಬಿಡಿಎ ಉತ್ತರ ವಿಭಾಗದ ಎಂ.ಎಸ್. ಶಂಕರಮೂರ್ತಿ (50), ಕೆ.ಎನ್. ರವಿಕುಮಾರ್ (50), ಶಬೀರ್ ಅಹ್ಮದ್ (50), ಡಿ. ಶ್ರೀರಾಮ್ (50) ಮತ್ತು ಶ್ರೀನಿವಾಸ್ ಬಂಧಿ ಇಂಜಿನಿಯರ್ ಗಳಾಗಿದ್ದಾರೆ.
ಈ ಇಂಜಿನಿಯರ್ ಗಳು ದಶಕಗಳಿಂದ ಬಿಡಿಎನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ನಗರ ಯೋಜನೆಯ ಜಯನಗರ, ಬನಶಂಕರಿ ಹಾಗೂ ಆರ್.ಟಿ.ನಗರ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ನಿಖರ ಅಳತೆ ವರದಿ(ಸಿಡಿಆರ್) ತಯಾರಿಕೆಯಲ್ಲಿ ನಿವೇಶನಗಳಿವೆ ಎಂದು ತೋರಿಸಿ ಬಳಿಕ ನಕಲಿ ದಾಖಲೆ ಸೃಷ್ಟಿಸಿರುವ ಆರೋಪ ಹೊತ್ತಿದ್ದಾರೆ.
ಅಲ್ದೇ 30ಕ್ಕೂ ಹೆಚ್ಚು ನಿವೇಶನಗಳಿಗೆ ನಕಲಿ ದಾಖಲೆ ಸೃಷ್ಟಿಸಿರುವ ಶಂಕೆಯಿದ್ದು, ಬಡಾವಣೆಗಳ ಭೂ ದಾಖಲೆ ಪರಿಶೀಲನೆ ವೇಳೆ ಅಕ್ರಮ ಬೆಳಕಿಗೆ ಬಂದಿದೆ. ಬಿಡಿಎ ಆಯುಕ್ತರ ಸೂಚನೆ ಮೇರೆಗೆ ಶೇಷಾದ್ರಿಪುರಂ ಠಾಣೆಯಲ್ಲಿ ಪೊಲೀಸರು FIR ದಾಖಲು ಮಾಡಿದ್ರು. ಅದೀಗ ಐವರು ಇಂಜಿನಿಯರ್ ಗಳನ್ನ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಮಹಿಳಾ ಕಂಡಕ್ಟರ್ ಗಳಿಗೆ ಶಿಫ್ಟ್ ವೈಸ್ ಕೆಲಸ ಮಾಡಲು BMTC ಅಸ್ತು.!
ಅಯೋಧ್ಯೆ ರಾಮ ಮಂದಿರ – ದೇಣಿಗೆ ಅಭಿಯಾನಕ್ಕೆ ಮುಸ್ಲಿಂ ಸಮುದಾಯವನ್ನು ಸೇರಿಸಲು ಆರ್ಎಸ್ಎಸ್ ನಿರ್ಧಾರ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel