ಸಂಜೆ 6 ಗಂಟೆಯಿಂದ ಪ್ರಮುಖ ರಸ್ತೆಗಳು, ಫೈಓವರ್ ಬಂದ್
ಬೆಂಗಳೂರು: ಹೊಸ ವರ್ಷಾಚರಣೆಗೆ ಕ್ಷಣಗಣನೆ ಆರಂಭವಾಗಿದೆ. ಹೆಮ್ಮಾರಿ ಕೊರೊನಾ ಹಾಗೂ ಬ್ರಿಟನ್ ರೂಪಾಂತರಿ ಕೊರೊರಾ ಭೀತಿಯ ನಡುವೆಯೂ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಠಫ್ ರೂಲ್ಸ್ ಜಾರಿಗೆ ತರಲಾಗಿದೆ.
ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ಮನೆಯಿಂದ ಹೊರಗೆ ಬಂದು ಹೊಸ ವರ್ಷಾಚರಣೆ ಮಾಡುವುದನ್ನು ತಡೆಯಲು ಸರ್ಕಾರ ಹಾಗೂ ನಗರ ಪೊಲೀಸರು ಕಠಿಣ ಕ್ರಮಗೈಗೊಳ್ಳಲು ನಿರ್ಧರಿಸಿದ್ದಾರೆ. ಹೀಗಾಗಿ ಹೊಸ ವರ್ಷಾಚರಣೆ ಸಂಭ್ರಮಾಚರಣೆಗೆಂದು ಮನೆಯಿಂದ ಹೊರಗೆ ಕಾಲಿಡುವ ಮುನ್ನ 10 ಬಾರಿ ಯೋಚಿಸಬೇಕಾಗಿದೆ. ಮನೆಗಳಲ್ಲಿ ನ್ಯೂಇಯರ್ ಪಾರ್ಟಿ ಮಾಡಲು ಅಡ್ಡಿ ಇಲ್ಲ, ಆದರೆ, ಸಾರ್ವಜನಿಕ ಪ್ರದೇಶ, ರಸ್ತೆ, ರೆಸಾರ್ಟ್, ಬೀಜ್ಗಳಲ್ಲಿ ಹೊಸ ವರ್ಷದ ಸಂಭ್ರಮಾಚರಣೆಗೆ ಬ್ರೇಕ್ ಹಾಕಲಾಗಿದೆ.
ಮುಂಚಿತವಾಗಿ ಬುಕ್ ಮಾಡಿರುವ ಸದಸ್ಯರಿಗೆ ಮಾತ್ರ ಕ್ಲಬ್, ರೆಸ್ಟೋರೆಂಟ್ಗಳಿಗೆ ಪ್ರವೇಶ ಇರಲಿದೆ. ಹೋಟೆಲ್ಗಳಲ್ಲಿ ಬುಕ್ ಮಾಡಿದ ರಸೀದಿ ಇಟ್ಟುಕೊಂಡವರಿಗೆ ಮಾತ್ರ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತಿದೆ.
ಮಧ್ಯಾಹ್ನ 12 ಗಂಟೆಯಿಂದಲೇ ನಿಷೇಧಾಜ್ಞೆ
ಬೆಂಗಳೂರು ನಗರದಲ್ಲಿ ಹೊಸ ವರ್ಷಾಚರಣೆ ನೆಪದಲ್ಲಿ ಜನ ಸೇರುವುದನ್ನು ತಡೆಯಲು ಇಂದು ಮಧ್ಯಾಹ್ನ 12 ಗಂಟೆಯಿಂದಲೇ ನಿಷೇಧಾಜ್ಷೆ ಜಾರಿಗೆ ಬರಲಿದೆ. ಇಂದು ಮಧ್ಯಾಹ್ನ 12 ಗಂಟೆಯಿಂದ ನಾಳೆ ಬೆಳಿಗ್ಗೆ 6 ಗಂಟೆವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ. ಹೀಗಾಗಿ ನಗರದಲ್ಲಿ ಗುಂಪು ಸೇರುವುದು ಪಾರ್ಟಿ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
15ಕ್ಕೂ ಹೆಚ್ಚು ರಸ್ತೆಗಳು ಬಂದ್..!
ಹೊಸ ವರ್ಷಾಚರಣೆ ಎಂದಾಗ ಬೆಂಗಳೂರಿನ ಎಂಜಿ ರಸ್ತೆ, ಕಮರ್ಷಿಯಲ್ ಸ್ಟ್ರೀಟ್, ಬ್ರಿಗೇಡ್ ರಸ್ತೆಗೆ ಹೋಗದೇ ಇದ್ದರೆ ಹೇಗೆ. ಆದರೆ, ಈ ವರ್ಷ, ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಕಮರ್ಷಿಯಲ್ ಸ್ಟ್ರೀಟ್, ಇಂದಿರಾನಗರ, ಕೋರಮಂಗಲ, ಕಬ್ಬನ್ ರಸ್ತೆ, ಕಸ್ತೂರ್ ಬಾ ರಸ್ತೆ, ರೆಸಿಡೆನ್ಸಿ ರಸ್ತೆಗಳು ಸೇರಿದಂತೆ ನಗರದ ಪ್ರಮುಖ 15 ರಸ್ತೆಗಳನ್ನು ಸಂಜೆ 6 ಗಂಟೆಯಿಂದಲೇ ಪೊಲೀಸರು ಬಂದ್ ಮಾಡಲಿದ್ದಾರೆ. ಈ ರಸ್ತೆಗಳಲ್ಲಿ ವಾಹನ ಪಾರ್ಕಿಂಗ್ ಕೂಡ ಬಂದ್ ಆಗಲಿದೆ. ಪೊಲಿಸರು ಬ್ಯಾರಿಕೇಡ್ ಹಾಕಿ ಸಂಪೂರ್ಣವಾಗಿ ವಾಹನ ಸಂಚಾರ ಬಂದ್ ಮಾಡಲಿದ್ದಾರೆ.
ನಗರದ ಬಹುತೇಕ ಫ್ಲೈಓರ್ಗಳು ಸಂಜೆ 6 ಗಂಟೆಯಿಂದಲೇ ಬಂದ್ ಆಗಲಿವೆ. ಬೆಂಗಳೂರು ನಗರದಿಂದ ಹೊರಗೆ ಹೊಸ ವರ್ಷಾಚರಣೆ ಹೋಗುವವರು ಯೋಚಿಸಿ ನಿರ್ಧಾರ ತೆಗೆದುಕೊಳ್ಳುವುದು ಉಚಿತ.
ರಾತ್ರಿ 11 ಗಂಟೆಗೆ ಮದ್ಯ ಮಾರಾಟ ಬಂದ್..!
ಕಳೆದ ವಾರ ರಾತ್ರಿ ಕಫ್ರ್ಯೂ ವಾಪಸ್ ಪಡೆದಿದ್ದ ಸರ್ಕಾರ, ಇಂದೂ ಕೂಡ ಮೊದಲೇ ನಿಗಧಿಪಡಿಸಿದ ಸಮಯದವರೆಗೆ ಬಾರ್ ಮತ್ತು ರೆಸ್ಟೋರೆಂಟ್ಗಳು ಇರಲಿವೆ ಎಂದು ತಿಳಿಸಿತ್ತು. ಆದರೆ, ಇಂದು ಅಬಕಾರಿ ಇಲಾಖೆ ಹೊಸ ಗೈಡ್ಲೈನ್ಸ್ ಪ್ರಕಟಿಸಿದ್ದು, ರಾತ್ರಿ 10.30ಕ್ಕೆ ಎಂಆರ್ಪಿ ಔಟ್ಲೆಟ್, ರಾತ್ರಿ 11ರೊಳಗೆ ಬಾರ್ ಆಂಡ್ ರೆಸ್ಟೋರೆಂಟ್ಗಳನ್ನು ಬಂದ್ ಮಾಡುವಂತೆ ಸೂಚಿಸಲಾಗಿದೆ.
ವಾಹನ ಸವಾರರೇ ಎಚ್ಚರ..ಎಚ್ಚರ
ಬೆಂಗಳೂರು ನಗರದಲ್ಲಿ ರಾತ್ರಿ ಹೊಸ ವರ್ಷಾಚರಣೆಗೆ ಬ್ರೇಕ್ ಹಾಕಲು ಸಜ್ಜಾಗಿರುವ ಖಾಕಿ ಪಡೆ, ರಾತ್ರಿ ಅನಗತ್ಯವಾಗಿ ಓಡಾಡುವವರಿಗೆ, ಕುಡಿದು ವಾಹನ ಚಾಲನೆ, ವ್ಹೀಲಿಂಗ್ ಮಾಡುವವರಿಗೆ ಕಠಿಣ ದಂಡಾಸ್ತ್ರ ಪ್ರಯೋಗಕ್ಕೆ ಮುಂದಾಗಿದೆ.
ಕುಡಿದು ವಾಹನ ಚಾಲನೆ ಮಾಡಿದರೆ ಲೈಸೆಲ್ಸ್ ರದ್ದು ಮಾಡುವುದು, ನೈಸ್ ರೋಡ್ ಸೇರಿದಂತೆ ಹೊರವಲಯದ ರಸ್ತೆಗಳಲ್ಲಿ ವ್ಹೀಲಿಂಗ್ ತಡೆಗೆ ಕ್ರಮ ಕೈಗೊಂಡಿದ್ದು, ವ್ಲೀಲಿಂಗ್ ಮಾಡುವವರು ಸಿಕ್ಕಿಬಿದ್ದರೆ ಜೈಲಿಗೆ ಕಳಿಸಲು ನಿರ್ಧರಿಸಿದೆ.
ಆದೇಶವನ್ನು ಉಲ್ಲಂಘಿಸಿದವರಿಗೆ ಐಪಿಸಿ ಸೆಕ್ಷನ್ 188, ಹಾಗೂ ಎನ್ಡಿಎಂಎ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಟ್ವಿಟರ್ನಲ್ಲಿ ಮಾಹಿತಿ ನೀಡಿದ್ದಾರೆ.
ಮಂಗಳೂರು, ಕಾರವಾರದಲ್ಲಿ ಬೀಚ್ ಬಂದ್..!
ಹೊಸ ವರ್ಷಾಚರಣೆಯನ್ನು ಬೀಚ್ಗಳಲ್ಲಿ ಆಚರಿಸುವುದನ್ನು ಸಂಪೂರ್ಣ ಬಂದ್ ಮಾಡಲಾಗುತ್ತಿದೆ. ಸಂಜೆ 6 ಗಂಟೆಗೆ ಮಂಗಳೂರು, ಉಡುಪಿ, ಕಾರವಾರದ ಎಲ್ಲಾ ಬೀಚ್ಗಳನ್ನು ಬಂದ್ ಮಾಡುವಂತೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಹೀಗಾಗಿ ಸಂಜೆಯಾಗುತ್ತಿದ್ದಂತೆ ಬೀಚ್ಗಳಲ್ಲಿ ಹೊಸವರ್ಷದ ಪಾರ್ಟಿ ಮಾಡಲು ತೆರಳಿದರೆ ತೊಂದರೆಗೆ ಸಿಕ್ಕಿ ಹಾಕಿಕೊಳ್ಳುವುದು ಪಕ್ಕಾ ಆಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel