ಬಳ್ಳಾರಿ: ರಾಜ್ಯದಲ್ಲಿ ಮೂರು ಕ್ಷೇತ್ರಗಳಿಗೆ ಚುನಾವಣೆ ಘೋಷಣೆಯಾಗಿದೆ. ಇದರಲ್ಲಿ ಸಂಡೂರು ಕ್ಷೇತ್ರ ಕೂಡ ಒಂದು. ಹಲವರು ಈಗಾಗಲೇ ಟಿಕೆಟ್ ಗಾಗಿ ಪೈಪೋಟಿ ನಡೆಸುತ್ತಿದ್ದಾರೆ. ನಾಯಕರ ಮನವೊಲಿಸುವ ಕಾರ್ಯ ಮಾಡುತ್ತಿದ್ದಾರೆ. ಈ ಮಧ್ಯೆ ಉಪಚುನಾವಣೆ (Sandur By Election) ವೇಳೆ ಸಂಸದ ತುಕಾರಾಂ (Tukaram) ಕುಟುಂಬಕ್ಕೆ ಟಿಕೆಟ್ ನೀಡಬಾರದು ಎಂದು ಹಲವರು ಪಟ್ಟು ಹಿಡಿದಿದ್ದಾರೆ.
ಗುರುವಾರ ಸಂಡೂರಲ್ಲಿ ಸಭೆ ನಡೆಸಿದ್ದ ಅತೃಪ್ತರು ಬೆಂಗಳೂರು ಕಡೆ ಮುಖ ಮಾಡಿದ್ದಾರೆ. ಉಪಸಮರವನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿರುವ ಜನಾರ್ದನ ರೆಡ್ಡಿ (Janardhana Reddy) ಸಂಡೂರಲ್ಲಿ ಹೊಸಮನೆಯ ಗೃಹಪ್ರವೇಶ ಮಾಡಿದ್ದಾರೆ. ಅಲ್ಲದೇ ತುಕಾರಾಮ್ ಸಹೋದರಿ ಪುಷ್ಪಾವತಿ ನಾಗರಾಜ್ ಮನೆಗೆ ಭೇಟಿ ನೀಡಿ ಬೆಂಬಲ ಯಾಚಿಸಿದ್ದಾರೆ. ಹೀಗಾಗಿ ಸಂಡೂರಿನಲ್ಲಿ ರಾಜಕೀಯ ಕಾರ್ಯಗಳು ಗರಿಗೆದರಿವೆ.