ಮಂಗಳೂರು : ನಟ ಅನಂತ್ ನಾಗ್ ಅಭಿನಯದ ತುಳು ಸಿನಿಮಾ ಇಂಗ್ಲೀಷ್ ಗೆ ಸೆನ್ಸಾರ್ ಮಂಡಳಿಯು ಯು/ಎ ಸರ್ಟಿಫಿಕೇಟ್ ನೀಡಿದೆ. ಈ ಸಿನಿಮಾ ಮಾರ್ಚ್ 20 ರಂದು ತೆರೆಕಾಣಲಿದ್ದು, ಚಿತ್ರಕ್ಕೆ ಕೆ.ಸೂರಜ್ ಶೆಟ್ಟಿ ನಿರ್ದೇಶನ, ರೀಶ್ ಶೇರಿಗಾರ್, ಶರ್ಮಿಳಾ ಶೇರಿಗಾರ್ ನಿರ್ಮಾಣವಿದೆ.
ಎಕ್ಕಸಕ, ಪಿಲಿಬೈಲ್ ಯಮುನಕ್ಕ ಮೊದಲಾದ ಹಿಟ್ ಸಿನಿಮಾ ನೀಡಿರುವ ಕೆ. ಸೂರಜ್ ಶೆಟ್ಟಿ ನಿರ್ದೇಶನ ಇಂಗ್ಲೀಷ್ ಸಹಜವಾಗಿಯೇ ನಿರೀಕ್ಷೆ ಹೆಚ್ಚಿಸಿದೆ. ಪೃಥ್ವಿ ಅಂಬರ್, ನವ್ಯಾ ಪೂಜಾರಿ, ಅರವಿಂದ ಬೋಳಾರ್, ನವೀನ್ ಡಿ ಪಡೀಲ್, ವಿಸ್ಮಯ ವಿನಾಯಕ್, ರವಿ ರಾಮಕಂಜ, ಬೋಜರಾಜ್ ವಾಮಂಜೂರು, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ ಮಾಣಿಬೆಟ್ಟು ಮೊದಲಾದವರು ಪಾತ್ರಕ್ಕೆ ಜೀವ ತುಂಬಿದ್ದಾರೆ.
ಚಿತ್ರಕ್ಕೆ ಕದ್ರಿ ಮಣಿಕಾಂತ್ ಸಂಗೀತ ನಿರ್ದೇಶಿಸಿದ್ದು, ಶಶಿರಾಜ್ ಕಾವೂರು, ಅರ್ಜುನ್ ಲೂಯಿಸ್ ಸಾಹಿತ್ಯ ಬರೆದಿದ್ದಾರೆ. ಕೃಷ್ಣ ಸಾರಥಿ ಛಾಯಾಗ್ರಹಣ, ಮನು ಶೇರಿಗಾರ್ ಸಂಕಲನ ಮಾಡಿದ್ದಾರೆ.
ಡಿಜಿಟಲ್ ಮಾಧ್ಯಮಕ್ಕೆ ಮಾನ್ಯತೆ – ಇಂದು ಮುಖ್ಯಮಂತ್ರಿಗಳ ಮಾಧ್ಯಮ ಕಾರ್ಯದರ್ಶಿಗೆ ಅಭಿನಂದನಾ ಸಮಾರಂಭ
ಸುಮಾರು ಎರಡು ದಶಕಗಳ ಹಿಂದೆ ಟಿವಿ ಮತ್ತು ಸುದ್ದಿಪತ್ರಿಕೆಗಳ ಮೂಲಕ ಮಾತ್ರ ಜನರಿಗೆ ತಲುಪುತ್ತಿದ್ದ ಸುದ್ದಿಗಳು, ಇಂದು ಡಿಜಿಟಲ್ ಯುಗದಲ್ಲಿ ಮೊಬೈಲ್ನಲ್ಲಿ ತಕ್ಷಣ ತಲುಪುವಂತಾಗಿದೆ. ಜಗತ್ತಿನ ಡಿಜಿಟಲೀಕರಣದ...