ಟ್ವಿಟ್ಟರ್ ನಲ್ಲಿ #TuluOfficialinKA_KL ಅಭಿಯಾನ ಆರಂಭ
ಮಂಗಳೂರು : ತುಳು ಭಾಷೆಗೆ ಅಧಿಕೃತ ಸ್ಥಾನಮಾನ ದೊರಕಬೇಕೆಂಬ ಕೂಗು ಮತ್ತೆ ಮುನ್ನಲೆಗೆ ಬಂದಿದೆ.
ಈ ವಿಚಾರವಾಗಿ ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಇಂದು ಟ್ವಿಟ್ಟರ್ ನಲ್ಲಿ ಅಭಿಯಾನ ಶುರುವಾಗಿದೆ.
ಇಂದು ಬೆಳಗ್ಗೆ 6ರಿಂದ ರಾತ್ರಿ 11.59 ಗಂಟೆಯವರೆಗೆ ‘ಟ್ವೀಟ್ ತುಳುನಾಡು’ ಹೆಸರಿನಲ್ಲಿ ಅಭಿಯಾನ ನಡೆಸಲಾಗುತ್ತಿದೆ.
#TuluOfficialinKA_KL ಹ್ಯಾಶ್ ಟ್ಯಾಗ್ ನಲ್ಲಿ ಟ್ವೀಟ್ ಮಾಡಲಾಗುತ್ತಿದೆ.
ಈವರೆಗೂ ಈ ಅಭಿಯಾನ ಬೆಂಬಲಿಸಿ ಬರೋಬ್ಬರಿ 28 ಸಾವಿರ ಮಂದಿ ಟ್ವೀಟ್ ಮಾಡಿದ್ದಾರೆ.
ಈ ಅಭಿಯಾನ ಮೂಲಕ ತುಳು ಭಾಷೆಯನ್ನು ಕರ್ನಾಟಕ ಹಾಗೂ ಕೇರಳ ರಾಜ್ಯದಲ್ಲಿ ಅಧಿಕೃತ ಮಾಡಬೇಕು ಮತ್ತು ಸದನದಲ್ಲಿ ತುಳು ಭಾಷೆಯನ್ನು ಅಧಿಕೃತ ಮಾಡುವ ಮಸೂದೆ ಜಾರಿಗೊಳಿಸಬೇಕು ಎನ್ನುವ ಒತ್ತಾಯ ಮಾಡಲಾಗ್ತಿದೆ.
ಬಿಜೆಪಿ ರಾಜ್ಯ ಕಾರ್ಯದರ್ಶಿ ಕ್ಯಾ. ಗಣೇಶ್ ಕಾರ್ಣಿಕ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಈ ಅಭಿಯಾನಕ್ಕೆ ಬೆಂಬಲ ನೀಡಿದ್ದಾರೆ.