ಸಿದ್ದಗಂಗಾ ಮಠಕ್ಕೆ ಹೋಗುತ್ತಿರುವುದು ಶ್ರೀಗಳ ಆಶೀರ್ವಾದ ಪಡೆಯೋಕೆ : ಜಯಮೃತ್ಯುಂಜಯ ಸ್ವಾಮೀಜಿ..!
ತುಮಕೂರು : ಪಂಚಮಸಾಲಿಗ ಸಮುದಾಯಕ್ಕೆ 2ಎ ಮೀಸಲಾತಿಗೆ ಹೋರಾಟ ಹಿನ್ನೆಲೆ , ಫೆಬ್ರವರಿ 21ಕ್ಕೆ ಸಮಾವೇಶ ನಡೆಸುವ ವಿಚಾರವಾಗಿ ತುಮಕೂರಿನಲ್ಲಿ ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿದ್ದಾರೆ. ನಂದಿಗ್ರೌಂಡ್ಸ್ ನಲ್ಲಿ ಸಮಾವೇಶ ಮಾಡಬೇಕು ಅನ್ನೋ ನಿರ್ಧಾರ ಆಗಿತ್ತು.. ಆದರೆ ಅಲ್ಲಿಂದ ವಿಧಾನಸೌಧ ದೂರ ಇರೋ ಹಿನ್ನೆಲೆ, ವಿಧಾನಸೌಧದ ಹತ್ರ ಇರೋ ಯಾವುದಾದರೂ ಗ್ರೌಂಡ್ ನಲ್ಲಿ ಮಾಡಬೇಕು ಅನ್ನೋ ಅಭಿಪ್ರಾಯ ವ್ಯಕ್ತವಾಗಿದೆ. ಎಲ್ಲರೊಟ್ಟಿಗೆ ಚರ್ಚೆ ಮಾಡಿ ನಾಳೆ ಬೆಳಗ್ಗೆ ನಿರ್ಧಾರ ತಿಳಿಸ್ತೇವೆ. ವಿಜಯಪುರದಿಂದ ಇಲ್ಲಿಗೆ ಪಾದಯಾತ್ರೆಗೆ 5 ಸಾವಿರ ಭಕ್ತರು ಬರಬೇಕೆಂದಿದ್ದರು. ಆದರೇ ಸಮಾವೇಶ ಇನ್ನೂ 21 ರಂದು ನಡೆಯೋ ಹಿನ್ನೆಲೆ. ಒಂದೇ ಸರಿ ಸಮಾವೇಶಕ್ಕೆ ಎಲ್ಲರೂ ಬರುವಂತೆ ತಿಳಿಸಿದ್ದೇವೆ ಎಂದಿದ್ದಾರೆ. 0
ಇದೇ ವೇಳೆ ರಾತ್ರಿ ಸಿದ್ದಗಂಗಾ ಮಠದಲ್ಲಿ ವಾಸ್ತವ್ಯ ಹೂಡುವ ವಿಚಾರವಾಗಿ ಮಾತನಾಡಿದ ಶ್ರೀಗಳು ಸಿದ್ದಗಂಗಾ ಮಠ ಅಂದ್ರೇ ಸರ್ವಜನಾಂಗದವ್ರಿಗೆ ಅನ್ನ,ಆಶ್ರಯ ಕೊಟ್ಟ ಮಠ. ಯಾವುದೇ ಜನಾಂಗದ ಪೂಜ್ಯರು, ಧಾರ್ಮಿಕವಾದ ಸಾಮಾಜಿಕ ನ್ಯಾಯದ ಪರ ಏನೇ ಕೆಲಸ ಮಾಡಿದ್ರೂ. ಅವ್ರಿಗೆ ಪ್ರಸಾದ ವ್ಯವಸ್ಥೆ ಮಾಡುವಂತಾ ಕೆಲಸ ಮಾಡಿದೆ. ಈಗ ನಾವು ಹೋಗ್ತಿರೋದು ಶ್ರೀಗಳ ಆಶಿರ್ವಾದ ಪಡೆದುಕೊಳ್ಳಲು. ಸಿದ್ದಗಂಗಾ ಮಠ ಎಲ್ಲಾ ಜಾತಿ ಜನಾಂಗಕ್ಕೆ ಆಶಿರ್ವಾದ ಮಾಡಿಕೊಂಡು ಬಂದಿದೆ. ನಮ್ಮ ಜೊತೆ ಇರುವವರೆಲ್ಲಾ ಶ್ರೀಮಠದ ಭಕ್ತರು.. ಹೋಗಿ ಪ್ರಸಾದ ಮಾಡುತ್ತೇವೆ.. ಗುರುಗಳ ಆಶಿರ್ವಾದ ಪಡೆದು ಗದ್ದುಗೆ ನಮಿಸಿ ಹೋಗ್ತೇವೆ ಎಂದಿದ್ದಾರೆ.
ಗೋಕಾಕ್ ನಲ್ಲಿ ಸ್ಪರ್ಧೆ ಎಂದ ಲಕ್ಷ್ಮೀ ಹೆಬ್ಬಾಳ್ ಕರ್ ಗೆ , ಮೋಸ್ಟ್ ವೆಲ್ ಕಮ್ ಎಂದು ಟಾಂಗ್ ಕೊಟ್ಟ ‘ಬೆಳಗಾವಿ ಸಾಹುಕಾರ’
ಅಯ್ಯಯ್ಯೋ ಅನ್ಯಾಯ : ಮನೆ, ರಸ್ತೆ ಬಳಿ ಗಾಡಿ ಪಾರ್ಕಿಂಗ್ ಗೆ ಶುಲ್ಕ
ಅಹಿಂದ ಪರ ಪ್ರತ್ಯೇಕ ಹೋರಾಟ ಬೇಕಿಲ್ಲ : ಸತೀಶ್ ಜಾರಕಿಹೊಳಿ
ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಬರ್ಬರ ಹತ್ಯೆ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








