Tumkur | ಪುರಾತನ ದೇವಾಲಯದಲ್ಲಿ ನಿಧಿ ತೆಗೆಯಲು ಯತ್ನ
ತುಮಕೂರು : ಪುರಾತನ ಕಾಲದ ದೇವಸ್ಥಾನದಲ್ಲಿ ನಿಧಿ ತೆಗೆಯಲು ಯತ್ನಿಸಿದ ಖದೀಮರು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಘಟನೆ ಪಾವಗಡ ತಾಲೂಕಿನ ವೆಂಕಟಾಪುರ ಗ್ರಾಮದಲ್ಲಿ ನಡೆದಿದೆ.
ಗ್ರಾಮದಲ್ಲಿ 700 ವರ್ಷ ಹಳೆಯ ಐತಿಹಾಸಿಕ ಚೋಳಪುರ ಅಂಜನೇಯ ದೇವಸ್ಥಾನ ಇದೆ.
ಇದರಲ್ಲಿ ನಿಧಿ ಇದೆ ಎಂದು ಭಾವಿಸಿದ ಕಳ್ಳರು ನಿನ್ನೆ ರಾತ್ರಿ ನಿಧಿ ತೆಗೆಯಲು ಯತ್ನಿಸಿದ್ದಾರೆ.

ದೇವಾಲಯದಲ್ಲಿ ಶಬ್ಧ ಬರುತ್ತಿದ್ದನ್ನು ಕೇಳಿ ಬಂದ ಗ್ರಾಮಸ್ಥರು, ಕಳ್ಳರನ್ನು ಹಿಡಿದು ಥಳಿಸಿದ್ದಾರೆ.
ಅಲ್ಲದೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಖದೀಮರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಘಟನೆ ಸಂಬಂಧ ಪಾವಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








