Tumkur | ಚಿರತೆ ಸೆರೆ – ನಿಟ್ಟುಸಿರು ಬಿಟ್ಟ ಜನರು
ತುಮಕೂರು : ಪಾವಗಡದಲ್ಲಿ ಪ್ರತ್ಯಕ್ಷ ವಾಗಿದ್ದ ಚಿರತೆ ಕೊನೆಗೂ ಸೆರೆಯಾಗಿದ್ದು, ಜನರು ನಿಟ್ಟುರಿಸು ಬಿಟ್ಟಿದ್ದಾರೆ.
ಪಾವಗಡ ಪಟ್ಟಣದ ಎಸ್ ಎಸ್ ಕೆ ಕಾಲೇಜ್ ಹಾಗೂ ಅಲ್ಪಸಂಖ್ಯಾತ ಹೆಣ್ಣು ಮಕ್ಕಳ ವಸತಿ ನಿಲಯ ಮಧ್ಯೆ ನಿನ್ನೆ ನೀರು ಕುಡಿಯುತ್ತಿತ್ತು.
ಇದನ್ನ ಕಂಡು ಪಟ್ಟಣದ ನಿವಾಸಿಗಳು ಬೆಚ್ಚಿಬಿದ್ದಿದ್ದರು. ಈ ವಿಷಯವನ್ನು ಸ್ಥಳೀಯರು ಅರಣ್ಯಾಧಿಕಾರಿಗಳಿಗೆ ತಿಳಿಸಿದ್ದರು.
ವಿಷಯ ತಿಳಿದು ಕೂಡಲೇ ಕಾರ್ಯಪ್ರೌರುತ್ತರಾದ ಅಧಿಕಾರಿಗಳು, ಚಿರತೆ ಸೆರೆಗೆ ಬೋನ್ ಇಟ್ಟಿದ್ದರು.
ಇದೀಗ ಚಿರತೆ ಬೋನಿಗೆ ಬಿದ್ದಿದ್ದು, ಜನರು ನಿಟ್ಟುಸಿರು ಬಿಟ್ಟಿದ್ದಾರೆ.