Tumkur | ಡಿವೈಡರ್ ಗೆ ಡಿಕ್ಕಿ – ಇಬ್ಬರು ಸ್ಥಳದಲ್ಲಿಯೇ ಸಾವು
ತುಮಕೂರು : ಡಿವೈಡರ್ ಗೆ ಡಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ತುಮಕೂರು ನಗರದ ಹನುಮಂತಪುರ ಬ್ರಿಡ್ಜ್ ಬಳಿ ನಡೆದಿದೆ.
21 ವರ್ಷದ ಸಚಿನ್ ಮತ್ತು 24 ವರ್ಷದ ಮಲ್ಲಿಕಾರ್ಜುನ್ ಮೃತ ದುರ್ದೈವಿಗಳಾಗಿದ್ದಾರೆ. ಇವರು ಹಾವೇರಿ ಜಿಲ್ಲಾ ಮೂಲದವರಾಗಿದ್ದಾರೆ.
ಇವರು ಬೆಂಗಳೂರಿನಿಂದ ಶಿರಾ ಕಡೆಗೆ ತೆರಳುತ್ತಿದ್ದರು.
ಹನುಮಂತಪುರದ ಬ್ರಿಡ್ಜ್ ಬಳಿ ಅಪಘಾತವಾಗಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ತಡರಾತ್ರಿ 1.45ರ ಸುಮಾರಿನಲ್ಲಿ ಈ ಘಟನೆ ನಡೆದಿದೆ.
ಈ ಸಂಬಂಧ ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.