Tumkur | ಶಿಕ್ಷಕಿಯರ ನಡುವೆ ಜಗಳ | ಶಾಲೆಗೆ ಬೀಗ
ತುಮಕೂರು : ಶಿಕ್ಷಕಿಯರ ನಡುವಿನ ಜಳಗಕ್ಕೆ ಬೇಸತ್ತು ಗ್ರಾಮಸ್ಥರೇ ಶಾಲೆಗೆ ಬೀಗ ಜಡಿದಿರುವ ಘಟನೆ ತುಮಕೂರು ತಾಲೂಕಿನ ಚಿಕ್ಕಸಾರಂಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಸಹಶಿಕ್ಷಕಿಯರ ಜಗಳ ನೋಡಲಾರದೇ ಚಿಕ್ಕಸಾರಂಗಿ ಗ್ರಾಮಸ್ಥರು ಶಾಲೆಗೆ ಬೀಗ ಜಡಿದಿದ್ದಾರೆ.
ಈ ಶಾಲೆಯಲ್ಲಿ ಶಿಕ್ಷಕಿಯರಾಗಿರುವ ಗಂಗಲಕ್ಷ್ಮಮ್ಮ ಹಾಗೂ ಭಾಗ್ಯಮ್ಮ ನಡುವೆ ಸಣ್ಣ ಸಣ್ಣ ವಿಚಾರಕ್ಕೂ ಜಗಳವಾಗುತ್ತಿದೆಯಂತೆ.
ಇವರಿಗೆ ಒಬ್ಬರನ್ನ ಕಂಡರೇ ಮತ್ತೊಬ್ಬರಿಗೆ ಆಗುವುದಿಲ್ಲವಂತೆ. ಮಕ್ಕಳಿಗೆ ಪಾಠ ಮಾಡದೇ ಸದಾ ಪರಸ್ಪರ ಜಗಳವಾಡುತ್ತಿದ್ದರಂತೆ.
ಇದರಿಂದ ಬೇಸತ್ತಿರುವ ಗ್ರಾಮಸ್ಥರು ಶಾಲೆಗೆ ಬೀಗ ಜಡಿದಿದ್ದಾರೆ.
ಅಲ್ಲದೆ ವೈಯಕ್ತಿಕ ವಿಚಾರಗಳು ಸೇರಿದಂತೆ ಶಾಲೆಗೆ ತಡವಾಗಿ ಬರುವ ವಿಚಾರಕ್ಕೆ ಜಗಳವಾಡುತ್ತಾರೆ ಎನ್ನಲಾಗಿದೆ.
ಸದ್ಯ ಶಾಲೆಗೆ ಬೀಗ ಜಡಿದಿರುವುದರಿಂದ ವಿದ್ಯಾರ್ಥಿಗಳು ಶಾಲೆಯ ಹೊರಗಡೆ ಇದ್ದು, ಸ್ಥಳಕ್ಕೆ ತುಮಕೂರು ಬಿಇಓ ಹನುಮನಾಯಕ್ ಭೇಟಿ ನೀಡಿ ಪರಿಶೀಲನೆ ನೀಡಿದ್ದಾರೆ.