Tumkur | ತುಂಬಿದ ಹೆಬ್ಬಾಕ ಕೆರೆ – ಗ್ರಾಮಕ್ಕೆ ನುಗ್ಗಿದ ನೀರು
ತುಮಕೂರು : ಜಿಲ್ಲೆಯಲ್ಲಿ ನಿರಂತರ ಮಳೆಯಾಗಿದ್ದು, ಜಿಲ್ಲೆಯ ಬಹುತೇಕ ಕೆರೆಗಳು ತುಂಬಿ ಹರಿಯುತ್ತಿವೆ.
ಅದರಂತೆ ತಾಲೂಕಿನ ಹೆಬ್ಬಾಕ ಕೆರೆ ಕೋಡಿ ಬಿದ್ದಿದ್ದು, ಕೆರೆಯಿಂದ ಹೊರ ಹರಿವು ಹೆಚ್ಚಳವಾಗಿದೆ.
ಇದರಿಂದ ಹಲವು ಗ್ರಾಮಗಳಿಗೆ ನೀರು ನುಗ್ಗಿದ್ದು ಗ್ರಾಮಸ್ಥರು ಪರದಾಟ ನಡೆಸುತ್ತಿದ್ದಾರೆ.

ನೀರು ರಸ್ತೆಗಳ ಮೇಲೆ ಹರಿಯುತ್ತಿರುವುದರಿಂದ ಗ್ರಾಮಸ್ಥರು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು ಪರದಾಟವಾಗುತ್ತಿದ್ದಾರೆ.
ಹೆಬ್ಬಾಕ ಕೆರೆಗೆ ಐದಾರು ಕೆರೆಗಳ ನೀರು ಒಳಹರಿವಿದೆ. ಇದು ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ತೀವ್ರ ಆತಂಕ ಮನೆ ಮಾಡಿದೆ.








