Tumkur | ಕಾಲುವೆ ಒಡೆದು ಜಮೀನುಗಳಿಗೆ ನೀರು
ತುಮಕೂರು : ಭಾರಿ ಮಳೆಗೆ ಮಧುಗಿರಿ ತಾಲೂಕಿನ ಕಲಿದೇವಪುರ ಗ್ರಾಮದ ಬಳಿ ಕಾಲುವೆ ಹೊಡೆದು ರೈತರ ಜಮೀನುಗಳಿಗೆ ನೀರು ನುಗ್ಗಿದೆ.
ಜೊತೆಗೆ ಕೆರೆಗೆ ಹೋಗಬೇಕಾದ ನೀರು ಕಾಲುವೆ ಹೊಡೆದು ರೈತರ ಜಮೀನುಗಳ ಮೂಲಕ ಕುಮಧ್ವತಿ ನದಿಗೆ ನೀರು ಸೇರುತ್ತಿದೆ.
ಗುಂಡಗಲ್ಲು ಕೆರೆಗೆ ಹೋಗುವ ಕಾಲುವೆ ಹೊಡೆದು ಅಪಾರ ಪ್ರಮಾಣದ ನೀರು ರೈತರ ಜಮೀನುಗಳ ಮೂಲಕ ನದಿಗೆ ಸೇರುತ್ತಿದೆ.
ಕಳೆದ ಬಾರಿ ಬಂದ ಮಳೆಗೆ ಕಾಲುವೆ ಹೊಡೆದಿತ್ತು. ಈ ಸಂಬಂಧ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರು.
ಆದ್ರೆ ಅಧಿಕಾರಿಗಳು ಸೂಕ್ತ ಪರಿಹಾರ ನೀಡದಿರುವ ಕಾರಣ ಮತ್ತೆ ನೀರು ಜಮೀನುಗಳಿಗೆ ನುಗ್ಗಿದೆ.
ಈ ಬಗ್ಗೆ ಗಮನಹರಿಸುವಂತೆ ಸ್ಥಳಿಯರು ಒತ್ತಾಯಿಸುತ್ತಿದ್ದಾರೆ.