Tumkuru : ಆರಗ ಜ್ಞಾನೇಂದ್ರ ಹಾರ್ಡ್ ಕೋರ್ ಬಿಜೆಪಿ – ಸುರೇಶ್ ಗೌಡ
ಜೆಡಿಎಸ್ ಶಾಸಕ ಗೌರಿಶಂಕರ ಗೃಹ ಸಚಿವರ ಮೇಲೆ ಆರೋಪ ವಿಚಾರವಾಗಿ ತುಮಕೂರಿನಲ್ಲಿ ಮಾಜಿ ಶಾಸಕ ಸುರೇಶ್ ಗೌಡ ಅವರು ಪ್ರತಿಕ್ರಿಯೆ ನೀಡಿದ್ದಾರೆ.. ಗೃಹ ಸಚಿವ ಅರಗ ಜ್ಞಾನೇಂದ್ರ ಜಿಲ್ಲಾ ಉಸ್ತುವಾರಿ ಆಗಿರೋದು ಗೌರಿ ಶಂಕರ್ ಗೆ ಭಯ ಹುಟ್ಟಿಸಿದೆ.. ಅರಗ ಜ್ಞಾನೇಂದ್ರ ಹಾರ್ಡ್ ಕೋರ್ ಬಿಜೆಪಿ.. ಗೌರಿಶಂಕರ್ ಹಲವು ತಪ್ಪು ಮಾಡಿದ್ದಾರೆ.. ಚುನಾವಣೆ ವೇಳೆ ಕ್ಷೇತ್ರದ ಜನರಿಗೆ ನಕಲಿ ಬಾಂಡ್ ಕೊಟ್ಟು ವಂಚಿಸಿದ್ದಾರೆ.. ಸಿಒಡಿ ಅವರ ವಿರುದ್ದ ಚಾರ್ಜ್ ಹಾಕಿದ್ದಾರೆ.. ಚಾರ್ಜ್ ಶೀಟ್ ಆಧಾರದ ಮೇಲೆ ಎಲ್ಲಿ ನನಗೆ ಜೈಲಿಗೆ ಕಳುಹಿಸ್ತಾರೋ ಎಂಬ ಭಯ ಇದೆ.. ನಕಲಿ ವ್ಯಾಕ್ಸಿನ್ ಕೊಟ್ಟ ಆರೋಪವೂ ಗೌರಿಶಂಕರ ಮೇಲೆ ಇದೆ.. ಹಾಗಾಗಿ ಗೃಹ ಸಚಿವರನ್ನು ಕಂಡರೆ ಗೌರಿಶಂಕರ ಗೆ ಭಯವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ..
ಇದೇ ವೇಳೆ ಗೌರಿಶಂಕರ ಹಿಟ್ ಆ್ಯಂಡ್ ರನ್ ಕೇಸ್ ಬಗ್ಗೆ ಮಾತನಾಡಿ , ಪೊಲೀಸರು ಇಸ್ಪಿಟ್ ದಂಧೆ ನಡೆಸ್ತಾರೆ ಎಂದು ಆರೋಪ ಮಾಡ್ತಾರೆ.. ಹಾಗಾದರೆ ಸಾಕ್ಷ್ಯ ಕೊಟ್ಟು ದೂರು ನೀಡಲಿ ಎಂದಿದ್ದಾರೆ..
ಇನ್ನೂ ಜಿಲ್ಲಾ ಪಂಚಾಯತಿ ಚುನಾವಣೆ ಒಳಗಡೆ ತುಮಕೂರು ಜಿಲ್ಲೆಯ ರಾಜಕೀಯದಲ್ಲಿ ಹಲವು ಬದಲಾವಣೆ ಆಗಲಿದೆ. ಜಿಲ್ಲೆಯಲ್ಲಿ ಬಿಜೆಪಿ ಮತ್ತೇ ಮೇಲಕ್ಕೆ ಎದ್ದೇಳಲಿದೆ.. ತುಮಕೂರು ಎಂಎಲ್ಸಿ ಚುನಾವಣೆಯಲ್ಲಿ ನಮಗೆ ಸೋಲಾಗಿದೆ.. ಹುಲಿನಾಯ್ಕರ್ ಗೆ ಟಿಕೆಟ್ ಕೊಟ್ಟರೆ ಬಿಜೆಪಿ ಗೆಲ್ತಿತ್ತೇನೋ.. ನಮ್ಮ ಅಭ್ಯರ್ಥಿ ಹೊರಗಿನವರು ಎಂದು ಮತದಾರರ ಅಸಮಾಧಾನ ಇತ್ತು.. ಈ ಸೋಲಿನ ಹೊಣೆ ಎಲ್ಲರೂ ಹೊರುತ್ತೇವೆ.. ನನ್ನ ರಕ್ತದ ಕಣ ಕಣದಲ್ಲೂ ಬಿಜೆಪಿ ಇದೆ.. ಯಡಿಯೂರಪ್ಪ ನವರು ಕೆಜೆಪಿ ಕಟ್ಟಿದಾಗಲೂ ನಾನು ಬಿಜೆಪಿಯಲ್ಲೇ ಇದ್ದೆ.. ಅದು ನನ್ನ ಪಕ್ಷದ ಕುರಿತ ಬದ್ಧತೆ ಎಂದಿದ್ದಾರೆ.. ಇನ್ನೂ ಡಿಕೆ ಶಿವಕುಮಾರ್ ಅವರ ಭೇಟಿ ವಿಚಾರವಾಗಿ ಮಾತನಾಡಿ ಅವರು ನನ್ನ ಹತ್ತಿರದ ಸಂಬಂಧಿ.. ಸಂಬಂಧಿಕರನ್ನು ಭೇಟಿ ಮಾಡೋದಕ್ಕೂ ರಾಜಕೀಯಕ್ಕೂ ವ್ಯತ್ಯಾಸ ಇದೆ ಎಂದಿದ್ದಾರೆ.









