ಬಳ್ಳಾರಿ : ತುಂಗಾ ಭದ್ರ ಜಲಾಶಯದಲ್ಲಿ ಒಳಹರಿವು ಹೆಚ್ಚಳವಾದ ಪರಿಣಾಮ ತುಂಗಭದ್ರಾ ಜಲಾಶಯದಿಂದ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸಲಾಗುತ್ತಿದೆ. ಬರೋಬ್ಬರಿ 32,288 ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ. ಈ ಹಿನ್ನೆಲೆ ನದಿ ಪಾತ್ರದ ಗ್ರಾಮಗಳು ಇದೀಗ ಪ್ರವಾಹ ಭೀತಿ ಎದುರಿಸುವಂತಾಗಿದೆ. ಹಂಪಿಯ ಪುರಂದರದಾಸರ ಮಂಟಪ, ಕಂಪ್ಲಿ ಸೇತುವೆ ಸೇರಿ ಅನೇಕ ಸ್ಮಾರಕಗಳು, ಮುಳುಗುವ ಸಾಧ್ಯತೆ ದಟ್ಟವಾಗಿದೆ.
ಇನ್ನೂ ಜಲಾಶಯದ ಸಾಮರ್ಥ್ಯ 1632.48 ಅಡಿ ಇದ್ದು, ಈಗಾಗಲೇ ಒಳಹರಿವು ಗರಿಷ್ಟಮಟ್ಟ ತಲುಪಿದೆ. ಅಂದರೆ ಸುಮಾರು 1633 ಅಡಿ ನೀರು ತುಂಬಿದೆ. ಹೀಗಾಗಿ ಹೆಚ್ಚುವರಿ ನೀರನ್ನು 10 ಕ್ರಸ್ಟ್ ಗೇಟ್ ಗಳ ಮೂಲಕ ಎರಡು ಅಡಿ ಎತ್ತರಕ್ಕೇರಿಸಿ ನದಿಗೆ ಹಹರಿಸಲಾಗುತ್ತದೆ. ಒಳಹರಿವಿನ ಪ್ರಮಾಣ ಹೆಚ್ಚಾದಂತೆ ನದಿಗೆ ಬಿಡುವ ನೀರಿನ ಪ್ರಮಾಣದಲ್ಲೂ ಹೆಚ್ಚಳವಾಗಲಿದೆ. ಹೆಚ್ಚುವರಿ 32,288 ಕ್ಯೂಸೆಕ್ಸ್ ನೀರನ್ನ ಟಿ.ಬಿ.ಡ್ಯಾಂ ನದಿಯಿಂದ ಹೊರಬಿಡಲಾಗಿದೆ. ಇದರಿಂದಾಗಿ ತುಂಗಾಭದ್ರ ನದಿ ಪಾತ್ರದ ಸುಮಾರು 32 ಕ್ಕೂ ಹೆಚ್ಚು ಹಳ್ಳಿಗಳಿಗೆ ಈಗ ಪ್ರವಾಹದ ಆತಂಕ ಎದುರಾಗಿದೆ.
ಇನ್ನೂ ಈಗಾಗಲೇ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತದ ವತಿಯಿಂದ ಒಟ್ಟು 32 ಕಾಳಜಿ ಕೇಂದ್ರಗಳ ನಿರ್ಮಾಣ ಮಾಡಿಸಲಾಗಿದೆ. SDRF ನಡಿ ಕಾಳಜಿ ಕೇಂದ್ರಗಳ ನಿರ್ಮಾಣ ಮಾಡಿಲಾಗಿದ್ದು, ನದಿಪಾತ್ರದ ಅಪಾಯದಂಚಿನ ಹಳ್ಳಿಯ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಅಲ್ಲದೇ ತೀವ್ರ,ಮಧ್ಯಮ ಹಾಗೂ ಕಡಿಮೆ ಅಪಾಯವನ್ನ ಎದುರಿಸೋ ಹಳ್ಳಿಗಳಿಗೆ ಭೇಟಿ ನೀಡುವಂತೆ ಜಿಲ್ಲಾಧಿಕಾರಿ SS ನಕುಲ್ ನೀಡಿರುವ ಸೂಚನೆ ಮೇರೆಗೆ ತಾಲೂಕಿನ ತಹಶಿಲ್ದಾರರ ನೇತೃತ್ವದ ಅಧಿಕಾರಿಗಳ ತಂಡ ಭೇಟಿ ನೀಡಿ ಸ್ಥಿತಿಗತಿಗಳ ಅವಲೋಕಿಸಲಿದೆ.









