ಬಳ್ಳಾರಿ : ಬಳ್ಳಾರಿಯ ಹೊಸಪೇಟೆ ಬಳಿಯ ತುಂಗಭದ್ರಾ ಜಲಾಶಯದ ಒಳಹರಿವಿನ ಪ್ರಮಾಣದಲ್ಲಿ ಭಾರೀ ಹೆಚ್ಚಳವಾಗಿದೆ. ಒಳಹರಿವು 89,132 ಕ್ಯುಸೆಕ್ ಇದ್ದು, ಒಟ್ಟು 33 ಕ್ರಸ್ಟ್ ಗೇಟ್ ಗಳ ಪೈಕಿ 20 ಗೇಟ್ ಗಳ ತೆರೆದು ನದಿಗೆ ನೀರು ಹರಿಬಿಡಲಾಗ್ತಿದೆ.
1,633 ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 1,632.38 ಅಡಿ ನೀರಿನ ಸಂಗ್ರಹವಿದೆ. ತುಂಗಾ ಜಲಾಶಯದಿಂದ 11,179 ಕ್ಯುಸೆಕ್, ಭದ್ರಾದಿಂದ 14,038 ಕ್ಯುಸೆಕ್ ನೀರು ಅಣೆಕಟ್ಟೆಗೆ ಹರಿದು ಬರುತ್ತಿದೆ. ಆದರೆ, ಜಲಾನಯನ ಪ್ರದೇಶದಲ್ಲಿ ಮಳೆ ನಿಂತಿದೆ. ಬರುವ ದಿನಗಳಲ್ಲಿ ಒಳಹರಿವು ಸಂಪೂರ್ಣ ತಗ್ಗಲಿದೆ ಎಂದು ಜಲಾಶಯ ಆಡಳಿತ ಮಂಡಳಿ ತಿಳಿಸಿದೆ.








