Turkey Earthquake : 6 ವರ್ಷದ ಬಾಲಕಿಯ ಜೀವ ಉಳಿಸಿತು NDRF ನ ಶ್ವಾನ…
ಟರ್ಕಿಯಲ್ಲಿ ಸಂಭವಿಸಿದ ಭೀಕರ ಭೂಕಂಪದ ಸಂದರ್ಭದಲ್ಲಿ ರಕ್ಷಣಾ ಕಾರ್ಯಾಚರಣೆಗಾಗಿ ಭಾರತದಿಂದ ಕಳುಹಿಸಲಾದ NDRF ತಂಡ ಅದ್ಭುತ ಕೆಲಸಗಳನ್ನ ಮಾಡುತ್ತಿದೆ. ಟರ್ಕಿಯ ಗಾಜಿಯಾಂಟೆಪ್ ಪ್ರಾಂತ್ಯದ ನೂರ್ಡಗಿ ಪ್ರದೇಶದಲ್ಲಿ ಹಿಮದ ಗಾಳಿಯ ನಡುವೆ ಹಗಲು ರಾತ್ರಿಯೆಲ್ಲ ಕೆಲಸ ಮಾಡುತ್ತಿದ್ದ NDRF ತಂಡ ಕಾರ್ಯಚರಣೆ ನಡೆಸುವ ವೇಳೆ ಅಂತಸ್ಥಿನ ಕಟ್ಟಡದ ಅವಶೇಗಳ ಕಡೆ ಬೊಗಳುತ್ತಿದ್ದ NDRF ಶ್ವಾನ ಜೂಲಿ ಬೊಗಳುತ್ತಿರುವುದನ್ನ ಕಂಡ ನಂತರ ಸುಮಾರು ಮೂರು ಗಂಟೆಗಳ ಪರಿಶ್ರಮದ ನಂತರ ಮಗುವೊಂದನ್ನ ಜೀವಂತವಾಗಿ ರಕ್ಷಿಸಲಾಗಿದೆ.
ಭೂಕಂಪ ಪೀಡಿತ ಟರ್ಕಿಯ ಗಾಜಿಯಾಂಟೆಪ್ ಪ್ರಾಂತ್ಯದ ನೂರ್ಡಗಿಯಲ್ಲಿ ಬೀಡುಬಿಟ್ಟಿದ್ದ ಭಾರತದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಯೋಧರಿಗೆ ಇದೊಂದು ‘ಪವಾಡ’. ಟರ್ಕಿಯ ಎನ್ಡಿಆರ್ಎಫ್ ತಂಡದ ನಾಯಕ ಕಮಾಂಡೆಂಟ್ ಗುರ್ಮಿಂದರ್ ಸಿಂಗ್ ದಿ ಇಂಡಿಯನ್ ಎಕ್ಸ್ಪ್ರೆಸ್ಗೆ ಮಾತನಾಡಿ “ಆರು ವರ್ಷದ ಬಾಲಕಿಯನ್ನು ಅವಶೇಷಗಳಿಂದ ಹೊರತೆಗೆದು ಸ್ಥಳೀಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು, ಅವರು ಆಸ್ಪತ್ರೆಗೆ ಸಾಗಿಸಿದರು… ಭೂಕಂಪದಿಂದ. ನಾವು ಫೆಬ್ರವರಿ 7 ರಂದು ಇಲ್ಲಿಗೆ ಬಂದಾಗಿನಿಂದ ನಾವು ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
NDRF ಮೂರು ತಂಡಗಳಲ್ಲಿ 151 ಸಿಬ್ಬಂದಿಯನ್ನು ಟರ್ಕಿಯಲ್ಲಿ ನಿಯೋಜಿಸಲಾಗಿದೆ. ನಾಲ್ಕು ತರಬೇತಿ ಪಡೆದ ನಾಯಿಗಳು ಸಹ ಕಾರ್ಯ ನಿರ್ವಹಿಸುತ್ತಿವೆ. ಟರ್ಕಿಯಲ್ಲಿ ಭೂಕಂಪದ ಕೇಂದ್ರಬಿಂದುದಿಂದ ಸುಮಾರು 23 ಕಿಮೀ ದೂರದಲ್ಲಿರುವ ನೂರ್ಡಗಿಯಲ್ಲಿ ಸುಮಾರು 600 ಕಟ್ಟಡಗಳು ಸಂಪೂರ್ಣವಾಗಿ ಕುಸಿದಿವೆ. NDRF ನ ಎರಡನೇ ತಂಡ ಟರ್ಕಿಯ ಹಟೇ ಪ್ರಾಂತ್ಯದಲ್ಲಿದೆ.
Turkey Earthquake: 6-year-old girl’s life saved by NDRF’s dog…