Turkey earthquake : ಭೂಕಂಪ ಪೀಡಿತ ಜಾಗದಲ್ಲಿ ಸಹಾಯ ಮಾಡುತ್ತಿದೆ ಭಾರತೀಯ ಸೇನೆಯ ಟ್ರಾಕಿಂಗ್ ವ್ಯವ್ಯಸ್ಥೆ…
ಮಧ್ಯಪ್ರಾಚ್ಯದೇಶಗಳಾದ ಟರ್ಕಿ ಮತ್ತು ಸಿರಿಯಾ ದೇಶಗಳು ಶತಮಾನದ ಪ್ರಕೃತಿ ವಿಕೋಪಕ್ಕೆ ತುತ್ತಾಗಿದೆ. ಭಾರತ ಸರ್ಕಾರ ಮತ್ತು ಅಂತರಾಷ್ಟ್ರೀಯ ಸಮುದಾಯದಿಂದ ಸಂಗ್ರಹಿಸಲಾದ ಪರಿಹಾರ ಸಾಮಗ್ರಿಗಳೊಂದಿಗೆ ಫೆಬ್ರವರಿ 15 ರಂದು ಸಿರಿಯಾಗೆ ಬೆಂಗಾವಲು ಪಡೆಯನ್ನ ಕಳುಹಿಸಲಾಗಿದೆ.
ಭಾರತ ಸರ್ಕಾರ ಟರ್ಕಿ ಮತ್ತು ಸಿರಿಯಾಗೆ ಅಗತ್ಯವಸ್ತಗಳು, ಔಷಧಗಳು ಸೇರಿದಂತೆ ಏಳು C 17 ವಿಮಾನಗಳನ್ನ ಕಳುಹಿಸಲಾಗಿದೆ. ಇದರ ಜೊತೆಗೆ ಟ್ರಾಕಿಂಗ್ ವ್ಯವಸ್ಥೆಯನ್ನೂ ಭಾರತ ಸರ್ಕಾರ ಒದಗಿಸಿದೆ.
ಭಾರತೀಯ ಸೇನೆ “SANCHAR” ಎಂಬ ನೆಟ್ವರ್ಕ್ ಆನ್ ಟೈಮ್ ಟ್ರಾಕಿಂಗ್ ಮತ್ತು ಮೆಸೆಜ್ ಮಾಡ್ಯೂಲ್ ಅನ್ನ ಅಭಿವೃದ್ಧಿ ಪಡಿಸಿದೆ. ಇದನ್ನ ಟರ್ಕಿಯಲ್ಲಿರುವ ಭಾರತೀಯ ಸೈನಿಕರು ಭೂಕಂಪದ ಪ್ರದೇಶಗಳಲ್ಲಿ ಬಳಸುತ್ತಿದ್ದಾರೆ. ಯುದ್ಧಭೂಮಿಯಲ್ಲಿ ತಂಡದ ಸದಸ್ಯರು ಮತ್ತು ಸ್ವತ್ತುಗಳನ್ನು ಪತ್ತೆ ಹಚ್ಚಲು ಮತ್ತು ಎಲ್ಲಾ ರಕ್ಷಣಾ ಪಡೆಗಳು ಮತ್ತು ಅರೆಸೈನಿಕ ಕಾರ್ಯಾಚರಣೆಗಳಲ್ಲಿ ಈ ಉಪಕರಣವನ್ನ ಬಳಸಲಾಗುತ್ತದೆ.
“ಸಂಚಾರ್” ವ್ಯವಸ್ಥೆಯನ್ನ ಕ್ಯಾಪ್ಟನ್ ಕರಣ್ ಸಿಂಗ್ ಮತ್ತು ಸಬ್ ಪಿಜಿ ಸಪ್ರೆ ಎಂಬುವವರು ಅಭಿವೃದ್ಧಿಪಡಿಸಿದ್ದಾರೆ. ಫೆಬ್ರವರಿ 6 ರಂದು ಟರ್ಕಿ ಮತ್ತು ಸಿರಿಯಾದಲ್ಲಿ 7.8 ತೀವ್ರತೆಯಲ್ಲಿ ಭಾರಿ ಪ್ರಮಾಣದಲ್ಲಿ ಭೂಕಂಪ ಸಂಭವಿಸಿ 40 ಸಾವಿರಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ.
Indian Army’s tracking system to help smoothen relief work in earthquake-hit Turkey and Syria