ಜಾತಿ ನಿಂದನೆ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆದ ಮುನ್ ಮುನ್ ..! ಬಂಧನಕ್ಕೆ ನೆಟ್ಟಿಗರ ಒತ್ತಾಯ..!
ಕೆಲ ಸಿನಿಮಾಗಳು ಹಾಗೂ ಹಿಂದಿ ಧಾರವಾಹಿಯಲ್ಲಿ ನಟಿಸಿ ಕೆಲ ಮಟ್ಟಿಗೆ ಜನರಿಗೆ ಚಿರಪರಿಚಿತರಾಗಿರುವ ನಟಿ ಮುನ್ ಮುನ್ ದತ್ತ ಈಗ ಸೋಷಿಯಲ್ ಮೀಡಿಯಾದಲ್ಲಿ ಟಾಪ್ ಟ್ರೆಂಡಿಂಗ್ ನಲ್ಲಿದ್ದಾರೆ. ಇದಕ್ಕೆ ಕಾರಣ ಅವರ ಬ್ಯೂಟಿ , ಗ್ಲಾಮರಸ ಲುಕ್ ಆಗ್ಲಿ, ಅಥವ ಅವರು ಯಾವುದೋ ಸಮಾಜಸೇವೆ ಮಾಡಿರೋದಕ್ಕಲ್ಲ.. ಬದಲಾವಗಿ ಸ್ಟಾರ್ ಅನ್ನೋ ಅಹಂನಲ್ಲಿ ಜಾತಿ ನಿಂದನೆ ಮಾಡಿ ಈ ನೆಟ್ಟಿಗರ ಕೈಲಿ ಛೀಮಾರಿ ಹಾಕಿಸಿಕೊಳ್ತಿದ್ದಾರೆ. ಟ್ವಿಟ್ಟರ್ ನಲ್ಲಿ #arrestmunmundutta ಟ್ರೆಂಡ್ ಆಗ್ತಿದೆ.
ಹೌದು… ಮುನ್ ಮುನ್ ದತ್ತ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಸೌಂದರ್ಯ ಹಾಗೂ ತಾವು ಮಾಡಿಕೊಳ್ಳುವ ಮೇಕಪ್ ಬಗ್ಗೆ ಲೈವ್ ಗೆ ಬಂದು ಮಾತನಾಡುತ್ತಾ, ‘ನಾನು ಯೂಟ್ಯೂಬ್‌ನಲ್ಲಿ ಬರುತ್ತಿದ್ದೇನೆ ಆದ್ದರಿಂದ ತುಸು ಮೇಕಪ್ ಮಾಡಿಕೊಂಡಿದ್ದೇನೆ ನನಗೆ ಆ ಜಾತಿಯವರಂತೆ ಕಾಣಲು ಇಷ್ಟವಿಲ್ಲ’ ಎಂದಿದ್ದರು. ವಿಡಿಯೋದಲ್ಲಿ ಅವರು ಒಂದು ಜಾತಿಯ ಹೆಸರು ಹೇಳಿದ್ದರು. ಮುನ್ ಮುನ್ ದತ್ತ ಅವರು ಜಾತಿ ನಿಂದನೆ ಮಾಡಿದ ವಿಡಿಯೋ ಇದೀಗ ಟ್ವಿಟ್ಟರ್ ಹಾಗೂ ಇತರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜಾತಿನಿಂದನೆ ಮಾಡಿರುವ ಮುನ್‌ಮುನ್ ರನ್ನ ಕೂಡಲೇ ಬಂಧಿಸಬೇಕು ಎಂಬ ಒತ್ತಾಯ ಸಾಮಾಜಿಕ ಜಾಲತಾಣದಲ್ಲಿ ಜೋರಾಗಿ ಕೇಳಿಬರುತ್ತಿದೆ.
ಇನ್ನೂ ತನ್ನ ತಪ್ಪು ಅರಿವಾಗುತ್ತಿದ್ದಂತೆ ಮುನ್‌ಮುನ್ ದತ್ತ ತಮ್ಮ ವಿಡಿಯೋವನ್ನು ಡಿಲೀಟ್ ಮಾಡಿದ್ದಾರೆ. ಆದರೂ ಸಹ ಕೆಲವರು ವಿಡಿಯೋ ರೆಕಾರ್ಡ್ ಮಾಡಿಕೊಂಡು ವಿಡಿಯೋ ತುಣುಕನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಬಳಿಕ ಈ ಬಗ್ಗೆ ಸ್ಪಷ್ಟನೆ ನೀಡಿರುವ ನಟಿ ‘ನನಗೆ ಆ ಪದದ ಅರ್ಥ ಗೊತ್ತಿರಲಿಲ್ಲ. ಯಾರನ್ನೊ ನೋಯಿಸಬೇಕು, ನಿಂದಿಸಬೇಕು ಎಂಬ ಉದ್ದೇಶದಿಂದ ನಾನು ಆ ಪದ ಬಳಕೆ ಮಾಡಿಲ್ಲ. ಎಲ್ಲ ಜಾತಿಯ, ಲಿಂಗದವರ ಬಗ್ಗೆ ನನಗೆ ಗೌರವವಿದೆ. ನನ್ನ ಮಾತಿನಂದ ಯಾರಿಗಾದರೂ ಬೇಸರವಾಗಿದ್ದರೆ ಕ್ಷಮಿಸಿ’ ಎಂದಿದ್ದಾರೆ.








