ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಟ್ವೀಟರ್ ಖಾತೆ ಹ್ಯಾಕ್. ಉಕ್ರೇನ್ ಬಿಕ್ಕಟ್ಟು, ಕ್ರಿಪ್ಟೋಕರೆನ್ಸಿ ಕುರಿತು ಟ್ವೀಟ್..
ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರ ಟ್ವೀಟರ್ ಖಾತೆಯನ್ನ ಹ್ಯಾಕ್ ಮಾಡಲಾಗಿದೆ. ಹ್ಯಾಕ್ ಆದ ಖಾತೆಯಿಂದ ಉಕ್ರೇನ್ ಬಿಕ್ಕಟ್ಟು ಮತ್ತು ಕ್ರಿಪ್ಟೋಕರೆನ್ಸಿ ಸಮಸ್ಯೆಗಳ ಕುರಿತು ಟ್ವೀಟ್ಗಳನ್ನು ಪೋಸ್ಟ್ ಮಾಡಲಾಗಿದೆ, ನಡ್ಡಾ ಅವರ ಖಾತೆ ಹ್ಯಾಕ್ ಆಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
“ಈಗ ಟ್ವೀಟರ್ ಖಾತೆ ನಿಯಂತ್ರಣದಲ್ಲಿದೆ. ನಿಖರವಾದ ಕಾರಣವನ್ನು ಖಚಿತಪಡಿಸಿಕೊಳ್ಳಲು ನಾವು ಟ್ವಿಟರ್ನೊಂದಿಗೆ ಮಾತನಾಡುತ್ತಿದ್ದೇವೆ” ಎಂದು ಪಕ್ಷದ ನಾಯಕರೊಬ್ಬರು ತಿಳಿಸಿದ್ದಾರೆ. ನಡ್ಡಾ ಅವರ ಖಾತೆಯಿಂದ ಉಕ್ರೇನ್ಗೆ ಸಹಾಯ ಮಾಡಲು ದೇಣಿಗೆಯನ್ನು ಕೋರಿದ ಒಂದು ಟ್ವೀಟ್ ಮತ್ತು ರಷ್ಯಾಕ್ಕೆ ಸಹಾಯ ಮಾಡಲು ಪ್ರಯತ್ನಿಸಿ ಎಂದ ಇನ್ನೊಂದು ಟ್ವೀಟ್ ಮಾಡಲಾಗಿದೆ.
“ಈಗ ಕ್ರಿಪ್ಟೋ ಕರೆನ್ಸಿ ದೇಣಿಗೆಗಳನ್ನು ಸ್ವೀಕರಿಸಲಾಗುತ್ತಿದೆ” ಎಂದು ಮತ್ತೊಂದು ಪೋಸ್ಟ್ ಮಾಡಲಾಗಿದೆ. ಕಳೆದ ವರ್ಷ ಡಿಸೆಂಬರ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಟ್ವಿಟರ್ ಖಾತೆಯನ್ನು ಕೆಲ ಸಮಯದವರೆಗೆ ಹ್ಯಾಕ್ ಮಾಡಲಾಗಿದ್ದು, ಬಿಟ್ಕಾಯಿನ್ಗೆ ಸಂಬಂಧಿಸಿದ ಸಂದೇಶವನ್ನು ಪೋಸ್ಟ್ ಮಾಡಲಾಗಿತ್ತು. ಸರ್ಕಾರಿ ಇಲಾಖೆಗಳು ಸೇರಿದಂತೆ ಇತರ ಕೆಲವು ಹ್ಯಾಂಡಲ್ಗಳನ್ನು ಇತ್ತೀಚೆಗೆ ಹ್ಯಾಕ್ ಮಾಡಲಾಗಿದೆ.