ಅವಳಿ ಮಗು ತಂದೆಯಿಂದ ಸಹೋದರಿಯ ರಕ್ಷಣೆಗೆ ಪ್ರಯತ್ನಿಸುತ್ತಿರುವ ಮುದ್ದಾದ ವಿಡಿಯೋ ವೈರಲ್..!
ಅವಳಿ ಮಕ್ಕಳ ಮುದ್ದಾದ ವಿಡಿಯೋವೊಂದು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದ್ದು, ಮುದ್ದು ಮಕ್ಕಳ ವಿಡಿಯೋಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಟಿಕ್ ಟಾಕ್ ಬಳಕೆದಾರನಾದ ಜೋನಾಥ್ ನಾರ್ಮೊಯ್ಲ್ ಎಂಬಾತ ತನ್ನ ಮಕ್ಕಳ ಮುದ್ದಾದ ವಿಡಿಯೋವನ್ನ ಶೇರ್ ಮಾಡಿಕೊಂಡಿದ್ದ. ಈ ವಿಡಿಯೋದಲ್ಲಿ ಇಬ್ಬರು ಅವಳಿ ಮಕ್ಕಳು ತನ್ನ ತಂದೆಯನ್ನ ಗುರುತಿಸುವಲ್ಲಿ ವಿಫಲರಾಗುತ್ತಾರೆ. ಕಾರಣ ಆ ಮಕ್ಕಳ ಜೋನಾಥನ್ ತನ್ನ ಗಡ್ಡ ಮೀಸೆ ತೆಗೆದು ಕ್ಲೀನ್ ಶೇವ್ ಮಾಡಿಕೊಂಡಿರುತ್ತಾನೆ. ಇದರಿಂದ ತಂದೆಯ ಅವಳಿ ಹೆಣ್ಣು ಮಕ್ಕಳು ಹೆದರಿ ಅತ್ತಿವೆ. ಇನ್ನೂ ಮನಸ್ಸು ಮುಟ್ಟುವ ದೃಶ್ಯವೆಂದರೆ. ಇಬ್ಬರಲ್ಲಿ ಒಂದು ಮಗು ತಂದೆಯ ಬಳಿ ಹೋಗುವ ಪ್ರಯತ್ನ ಮಾಡುತ್ತೆ. ಆದ್ರೆ ಮತ್ತೊಂದು ಮಗು ಆ ಮಗುವಿಗೆ ಹೋಗದಂತೆ ಕೈ ಅಡ್ಡ ಇಟ್ಟು ರಕ್ಷಿಸುವ ಪ್ರಯತ್ನ ಮಾಡುತ್ತೆ. ಈ ದೃಶ್ಯ ನೋಡಿ ನೆಟ್ಟಿಗರು ಫಿದಾ ಆಗಿದ್ದು, ನಾನಾ ರೀತಿಯ ಕಮೆಂಟ್ ಗಳನ್ನ ಮಾಡ್ತಿದ್ಧಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.
https://twitter.com/Aqualady6666/status/1367372395762229248








