ವಕೀಲೆ ಮೇಲೆ ಹಲ್ಲೆಗೆ ಟ್ವಿಸ್ಟ್: ಮೊದಲು ಚಪ್ಪಲಿಯಿಂದ ಹೊಡೆದಿದ್ದ ಸಂಗೀತ – ವೀಡಿಯೋ ವೈರಲ್..
ಬಾಗಲಕೋಟೆಯಲ್ಲಿ ವಕೀಲೆ ಸಂಗೀತಾ ಮೇಲೆ ಮಹಂತೇಶ್ ಎನ್ನುವ ವ್ಯಕ್ತಿ ಹಲ್ಲೆ ಮಾಡಿದ್ದ ವೀಡಿಯೋ ಭಾರಿ ವೈರಲ್ ಆಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮತ್ತೊಂದು ವೀಡಿಯೋ ವೈರಲ್ ಆಗಿದೆ.
ಈ ಹಿಂದೆ ವಿನಾಯಕ ನಗರದ ನಿವಾಸಿ ಮಹಾಂತೇಶ್ ಚೊಳಚಗುಡ್ಡ ವಕೀಲೆ ಸಂಗೀತಾ ಶಿಕ್ಕೇರಿ ಹಾಗೂ ಆಕೆಯ ಪತಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದ ವೀಡಿಯೋ ವೈರಲ್ ಆಗಿತ್ತು. ಆದರೆ ಈಗ ಮಹಾಂತೇಶ್ ಚೊಳಚಗುಡ್ಡ ಅವರ ಮೇಲೆ ಸಂಗೀತಾ ಅವರು ಚಪ್ಪಲಿಯಲ್ಲಿ ಹೊಡೆದ ವೀಡಿಯೋ ವೈರಲ್ ಆಗಿದೆ.

ವಕೀಲೆ ಸಂಗೀತಾ ಶಿಕ್ಕೇರಿ ಪತಿ ನವೀನ್ ಜೊತೆ ಬಂದು ಗಿಫ್ಟ್ ಸೆಂಟರ್ಗೆ ಹೋಗಿ ಮಹಾಂತೇಶ್ ಚೊಳಚಗುಡ್ಡಗೆ ಚಪ್ಪಲಿಯಿಂದ ಹಲ್ಲೆ ಮಾಡಿದ್ದಾಳೆ. ಮೇ 14ರಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಮಹಾಂತೇಶ್ ಮೇಲೆ ಚಪ್ಪಲಿಯಿಂದ ಹೊಡೆದಿದ್ದಾರೆ.
ನಂತರ ತಾಳ್ಮೆ ಕಳೆದುಕೊಂಡ ಮಹಾಂತೇಶ್ ಚೋಳದಗುಡ್ಡ ವಕೀಲೆಯ ಹಲ್ಲೆ ಮಾಡಿದ್ದಾರೆ. ಬಾಗಲಕೋಟೆ ಕೆರೂಡಿ ಆಸ್ಪತ್ರೆ ಬಡಾವಣೆ ,ಮಹಾಂತೇಶ್ ಗಿಪ್ಟ್ ಸೆಂಟರ್ ಮುಂದೆ ಈ ಘಟನೆ ನಡೆದಿತ್ತು. ಈವರೆಗೂ ಮಹಾಂತೇಶ್ ಮಹಿಳೆಗೆ ಹಲ್ಲೆ ಮಾಡಿರುವ ವೀಡಿಯೋ ಅಷ್ಟೇ ವೈರಲ್ ಆಗಿತ್ತು. ಆರಂಭದಲ್ಲಿ ಸಂಗೀತಾ, ಮಹಾಂತೇಶ್ ಮೇಲೆ ಹಲ್ಲೆ ಮಾಡಿರುವ ತುಣುಕನ್ನು ಕಟ್ ಮಾಡಿ ವೀಡಿಯೋ ಹರಿಬಿಡಲಾಗಿತ್ತು.








