ಪೆಪ್ಪರ್ ಸ್ಪ್ರೇ ಬಳಸಿ ತಾಯಿಯೇ ಮಗಳನ್ನು ಅಪಹರಿಸಿದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್..!
ಉತ್ತರಕನ್ನಡ : ಇತ್ತೀಚೆಗಷ್ಟೇ ಉತ್ತರಕನ್ನಡದಲ್ಲಿ ವಿವಾಹಿತೆಯೊಬ್ಬಳನ್ನ ಆಕೆಯ ತಾಯಿಯೇ ಕಿಡ್ನಾಪ್ ಮಾಡಿಸಿದ್ದ ಪ್ರಕರಣ ಬೆಳಕಿಗೆ ಬಂದಿತ್ತು. ಮಗಳನ್ನ ಗಂಡನ ಮನೆಯಿಂದಲೇ ಕಿಡ್ನಾಪ್ ಮಾಡಿಸಲಾಗಿತ್ತು. ಪೆಪ್ಪರ್ ಸ್ಪ್ರೇ ಬಳಸಿ ನಾಲ್ವರು ಕಿಡ್ನಾಪ್ ಮಾಡಿದ್ದರು. ಆದರೆ ಅಪಹರಣಕ್ಕೆ ಆಕೆಯ ತಾಯಿಯೇ ಸುಪಾರಿ ನೀಡಿದ್ದಾಗಿ ತಿಳಿದುಬಂದಿತ್ತು. ಈ ಸಂಬಂಧ ಶಿರಸಿಯ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಅಪಹರಣಕ್ಕೆ ಒಳಗಾಗಿದ್ದ ಮಹಿಳೆಯ ಮತಿ ಮಣಿಕಂಠ ದೂರು ದಾಖಲಿಸಿದ್ದರು. ದೂರಿನ ಅನ್ವಯ ತನಿಖೆ ಆರಂಭಿಸಿದ್ದ ಪೊಲೀಸರು ಇದೀಗ ನಾಪತ್ತೆಯಾಗಿದ್ದ ತಾಯಿ, ಕಿಡ್ನಾಪ್ ಆಗಿದ್ದ ಮಗಳನ್ನ ಪತ್ತೆ ಹಚ್ಚಿದ್ದಾರೆ. ಆದ್ರೆ ಕಿಡ್ನಾಪ್ ಆಗಿದ್ದ ಮಹಿಳೆಯ ಹೇಳಿಕೆಯಿಂದಾಗಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಬೇರೊಬ್ಬನ ಜೊತೆ ಮಂಚದಲ್ಲಿದ್ದ ಪತ್ನಿ : ಕೋಪಗೊಂಡ ಪತಿ ಮಾಡಿದ್ದೇನು ನೋಡಿ..!
ಹೌದು.. ಪ್ರೀತಿಸಿ ಮದುವೆಯಾದ ಕಾರಣಕ್ಕೆ ಗಂಡನ ಮನೆಯಿಂದ ಮಗಳನ್ನು ತಾಯಿಯೇ ಅಪಹರಣ ಮಾಡಿದ್ದರು ಎಂದು ಆರೋಪಿಸಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪಹರಣಕ್ಕೊಳಗಾಗಿದ್ದಳು ಎನ್ನಲಾಗಿದ್ದ 18 ವರ್ಷದ ಯುವತಿ ಖುತಿಕಾ ನೀಡಿರುವ ಹೇಳಿಕೆ ಇದೀಗ ಎಲ್ಲಾ ಲೆಕ್ಕಾಚಾರಗಳನ್ನ ತಲೆಕೆಳಗಾಗಿಸಿದೆ. ಡಿಸೆಂಬರ್ 25ರಂದು ಶಿರಸಿಯ ಬಸವೇಶ್ವರ ನಗರದಿಂದ ಋತಿಕಾ ಮಣಿಕಂಠ ಕೊಡಿಯಾಳನ್ನ ಅಪಹರಣ ಮಾಡಲಾಗಿತ್ತು. ಋತಿಕಾ ತಾಯಿ ರೂಪಾ, ಕಿರಣ ಬೆಲ್ಲದ್ ಹಾಗೂ ಇತರ ನಾಲ್ಕೈದು ಜನ ಸೇರಿ ಅಪಹರಣ ಮಾಡಿದ್ದರು ಎನ್ನಲಾಗಿತ್ತು. ಇನ್ನೂ ಅಪಹರಣಗೊಂಡಿದ್ದ ಋತಿಕಾ ಠಾಣೆಗೆ ಹಾಜರಾಗಿದ್ದು, ತಾನು ಮಣಿಕಂಠ ಕೋಡಿಯಾನೊಂದಿಗೆ ವಿವಾಹವಾಗಿದ್ದ ವಿಚಾರ ಬಹಿರಂಗಪಡಿಸಿದ್ದಾಳೆ.
Sorry… I cant ಎಂದ ರಜನಿ : ಮಹತ್ವದ ಘೋಷಣೆ..!
ಇನ್ನೂ ಮದುವೆಯಾಗಿದ್ದ ವಿಚಾರವನ್ನ ತನ್ನ ಮನೆಯಲ್ಲಿ ಹೇಳಿರಲಿಲ್ಲ. ಬಳಿಕ ಈ ವಿಷಯವನ್ನು ತಾಯಿಗೆ ತಿಳಿಸಿ ಬಸವೇಶ್ವರದಲ್ಲಿನ ಮಣಿಕಂಠನ ಮನೆಗೆ ಅವರನ್ನ ಖುದ್ದು ನಾನೇ ಕರೆಯಿಸಿದೆ. ನಾನೇ ನನ್ನ ಸ್ವಂತ ಇಚ್ಛೆಯಿಂದ ನಾನೇ ಅವರ ಜೊತೆ ಹೋದೆ. ನನ್ನನ್ನು ಯಾರು ಅಪಹರಿಸಿಲ್ಲ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಇನ್ನೂ ಆಕೆಗೆ ಬ್ಲಾಕ್ ಮೇಲ್ ಮಾಡಿ ಈ ರೀತಿಯಾಗಿ ಹೇಳಿಸಲಾಗಿದ್ಯಾ ಅಥವ ಯುವತಿ ನಿಜ ಹೇಳುತ್ತಿದ್ದಾಳಾ ಅನ್ನೋದು ಸಂಪೂರ್ಣ ತನಿಖೆಯ ನಂತರವೇ ಬಹಿರಂಗವಾಗಲಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








