ಬ್ಲೂ ಜೊತೆಗೆ ಗೋಲ್ಡ್ ಮತ್ತು ಬೂದು ಬಣ್ಣದ ಚೆಕ್ ಮಾರ್ಕ್ ಪರಿಚಯಿಸಿದ ಟ್ವೀಟರ್.. .
ಎಲಾನ್ ಮಸ್ಕ್ ಟ್ವೀಟರ್ ಮಾಲಿಕತ್ವವನ್ನ ಕೈ ವಶ ಮಾಡಿಕೊಂಡಾಗಿನಿಂದಲೂ ಹಲವಾರು ಪ್ರಯೋಗಗಳನ್ನ ಮಾಡುತ್ತಲೇ ಇದ್ದಾರೆ. ಈಗಾಗಾಲೇ ಬ್ಯೂಟಿಕ್ ಚೆಕ್ ಮಾರ್ಕ್ ಗೆ ಚಂದಾದಾರಿಕೆಯನ್ನ ಆರಂಭಿಸಿದ್ದ ಬ್ಲೂ ಜೊತೆಗೆ ಹಲವು ಬಣ್ಣಗಳ ಚೆಕ್ ಮಾರ್ಕ್ ಗಳನ್ನ ಬಿಡುಗಡೆ ಮಾಡುತ್ತಿದೆ. ನೀಲಿ ಜೊತೆಗೆ ಬೂದು ಮತ್ತು ಗೋಲ್ಡ್ ಕಲರ್ ನಲ್ಲಿ ಟ್ವೀಟರ್ ಚೆಕ್ ಮಾರ್ಕ್ ಗಳನ್ನ ಬಿಡುಗಡೆ ಮಾಡುತ್ತಿದೆ.
ಬಿಸಿನೆಸ್ , ವೈಯಕ್ತಿಕ, ಸರ್ಕಾರಿ ಸಂಸ್ಥೆಗಳಿಗೆ ವಿವಿಧ ಕಲರ್ ಕೋಡ್ ಗಳನ್ನ ಕೊಡಲಾಗುತ್ತಿದೆ.
ಪರಿಶೀಲಿಸಲಾದ ಕಂಪನಿಗಳು ಮತ್ತು ಅಧಿಕೃತ ವ್ಯವಹಾರಿಕ ಖಾತೆಗಳಿಗಾಗಿ ಗೋಲ್ಡ್ ಕಲರ್ ಚೆಕ್ ಮಾರ್ಕ್
ಪರಿಶೀಲಿಸಿದ ಸರ್ಕಾರಿ ಖಾತೆಗಳು ಅಥವಾ ಸರ್ಕಾರದೊಂದಿಗೆ ಸಂಯೋಜಿತವಾಗಿರುವ ಮತ್ತು Twitter ಮೂಲಕ ಮೇಲ್ವಿಚಾರಣೆ ಮಾಡುವ ಖಾತೆಗಳಿಗೆ ಬೂದು ಚೆಕ್‌ಮಾರ್ಕ್
ವೈಯಕ್ತಿಕ ಖಾತೆಗಳಿಗೆ ವ್ಯಕ್ತಿಗಳಿಗೆ ಚೆಕ್ ಮಾರ್ಕ್ ನೀಡಲಾಗುತ್ತಿದೆ.
Twitter ಬೂ ಮಾರ್ಕ್ ಚಂದಾದಾರಿಕೆ
ಇನ್ನೂ ಟ್ವೀಟರ್ ಬ್ಲೂ ಚೆಕ್ ಮಾರ್ಕ್ Android ಬಳಕೆದಾರು 8 ಡಾಲರ್ ನೀಡಬೇಕು. ಇದೇ ಬ್ಲೂ ಚೆಕ್ ಮಾರ್ಕ್ iPhone ಮಾಲೀಕರಿಗೆ ತಿಂಗಳಿಗೆ 11 ಡಾಲರ್ ವೆಚ್ಚವಾಗುತ್ತದೆ. ಬ್ಲೂ ಚೆಕ್ ಮಾರ್ಕ್ ಹೊಂದಿರುವವರಿಗೆ ಎಡಿಟ್ ಟ್ವೀಟ್, 1080p ವೀಡಿಯೊ ಅಪ್‌ಲೋಡ್‌ಗಳು, ರೀಡರ್ ಮೋಡ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನ ಪಡೆಯಬಹುದು ಎಂದು ಕಂಪನಿ ಹೇಳಿದೆ.
ಬ್ಲೂ ಚೆಕ್ ಮಾರ್ಕ್ ಹೊಂದಲು ನಿಮ್ಮ Twitter ಖಾತೆ ಕನಿಷ್ಠ 90 ದಿನಗಳ ಹಳೆಯದಾಗಿರಬೇಕು ಮತ್ತು ದೃಢೀಕೃತ ಫೋನ್ ಸಂಖ್ಯೆಯನ್ನು ಹೊಂದಿರಬೇಕು.
Twitter Accounts Now Verified With Gold, Grey And Blue Ticks – What Does It Mean








