ಬೆಂಗಳೂರು : ದೇಶ ಕೊರೊನಾ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಅವರು ಜನರಲ್ಲಿ ದ್ವೇಷದ ಭಾವನೆ ಹರಡತ್ತಿದ್ದಾರೆ. ಹೀಗಾಗಿ ಸಂಸದೆ ಶೋಭಾ ಕರಂದ್ಲಾಜೆ ಅವರನ್ನು ಬಂಧಿಸುವಂತೆ ಟ್ವಿಟ್ಟರ್ ನಲ್ಲಿ ಅಭಿಯಾನವೊಂದು ಶುರುವಾಗಿದೆ.
ಸಂಸದೆ ಶೋಭಾ ಕರಂದ್ಲಾಜೆ ಅವರು ತಮ್ಮ ವಿವಾದಿತ ಹೇಳಿಕೆಗಳು ಮತ್ತು ಮಾತುಗಳಿಂದ ಆಗಾಗ ಸುದ್ದಿಯಾಗುತ್ತಿದ್ದಾರೆ. ಇತ್ತೀಚೆಗೆ ಗ್ರೀನ್ ಝೋನ್ ಆಗಿದ್ದ ಶಿವಮೊಗ್ಗದಲ್ಲಿ ತಬ್ಲಿಘಿಗಳಿಂದ ಸೋಂಕು ಹರಡಿದೆ ಎಂದು ಟ್ವೀಟ್ ಮಾಡಿ ತಬ್ಲಿಘಿಗಳು ದೇಶಕ್ಕೆ ಕಂಟಕ ಎಂದು ಬರೆದಿದ್ದರು. ಈ ಟ್ವೀಟ್ ಮಾಡುತ್ತಿದ್ದಂತೆಯೇ ಸಾಮಾಜಿಕ ಜಾಲತಾಣದಲ್ಲಿ ಶೋಭಾ ಕರಂದ್ಲಾಜೆ ವಿರುದ್ಧ ಭಾರಿ ಟೀಕೆ ವ್ಯಕ್ತವಾಗಿದೆ. ಅರೆಸ್ಟ್ ಶೋಭಾ ಕರಂದ್ಲಾಜೆ ಎಂದು ಹ್ಯಾಶ್ ಟಾಗ್ ಮಾಡಿ ಅವರನ್ನು ಬಂಧಿಸುವಂತೆ ಒತ್ತಾಯಿಸಲಾಗಿದೆ. ದೇಶದಲ್ಲಿ ವಿವಿಧ ಜಾತಿ, ಧರ್ಮಗಳ ನಡುವೆ ದ್ವೇಷದ ಕಿಚ್ಚು ಹತ್ತಿಸುವ ಶೋಭಾ ಕರಂದ್ಲಾಜೆಯವರನ್ನು ಐಪಿಸಿ 153(ಎ)ಯಡಿ ಬಂಧಿಸಿ ಎಂದು ಟ್ವಿಟ್ಟರ್ ಖಾತೆದಾರರೊಬ್ಬರು ಟ್ವೀಟ್ ಮಾಡಿದ್ದಾರೆ.