ಚೀನಾ, ಟರ್ಕಿ ಹಾಗೂ ರಷ್ಯಾದ 170,000 ಖಾತೆಗಳನ್ನು ತೆಗೆದು ಹಾಕಿದ ಟ್ವಿಟರ್

ಸ್ಯಾನ್ ಫ್ರಾನ್ಸಿಸ್ಕೋ, ಜೂನ್ 13: ಸಾಮಾಜಿಕ ಜಾಲತಾಣ ಟ್ವಿಟರ್ ಚೀನಾ, ಟರ್ಕಿ ಹಾಗೂ ರಷ್ಯಾಗೆ ಸೇರಿದ ಎಲ್ಲಾ ಖಾತೆಗಳನ್ನು ತೆಗೆದು ಹಾಕಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಟ್ವಿಟ್ಟರ್ ಈ ಖಾತೆಗಳು ಸುಳ್ಳು ಮಾಹಿತಿ ಹರಡುವುದು, ಸಿದ್ಧಾಂತಗಳನ್ನು ಪ್ರಚಾರ ಮಾಡುವುದು ಅಥವಾ ಆಡಳಿತದ ಟೀಕಾಕಾರರನ್ನು ನಿಂದಿಸಲು ಬಳಕೆಯಾಗುತ್ತಿದ್ದವು ಎಂದು ಹೇಳಿದೆ.
ಚೀನಾ, ಟರ್ಕಿ ಹಾಗೂ ರಷ್ಯಾಗೆ ಸೇರಿದ ಸುಮಾರು 1,70,000 ಕ್ಕೂ ಹೆಚ್ಚು ಖಾತೆಗಳನ್ನು ತೆಗೆದು ಹಾಕಲಾಗಿದ್ದು, ಚೀನಾಕ್ಕೆ ಈ ಮೊದಲೇ ಟ್ವಿಟ್ಟರ್ ಖಾತೆಯನ್ನು ತೆಗೆದುಹಾಕುವುದಾಗಿ ಎಚ್ಚರಿಕೆ ನೀಡಿತ್ತು.
ಟರ್ಕಿಯ 7,340 ಖಾತೆ ಮತ್ತು ರಷ್ಯಾದ 1,152 ಖಾತೆಗಳನ್ನು ತೆಗೆದುಹಾಕಲಾಗಿದೆ. ಚೀನಾದ ಅತ್ಯಧಿಕ ಪ್ರಮಾಣದ ಖಾತೆಗಳನ್ನು ತೆಗೆದುಹಾಕಲಾಗಿದ್ದು, 23,750 ಖಾತೆಗಳನ್ನು ಹೆಚ್ಚು ಪ್ರಚಲಿತದಲ್ಲಿಡಲು ಚೀನಾ 1,50,000 ವರ್ಧಕ ಖಾತೆಗಳನ್ನು ತೆರೆದಿತ್ತು ಎಂದು ಟ್ವಿಟ್ಟರ್ ಮಾಹಿತಿ ನೀಡಿದೆ.

ಚೀನಾ, ಟರ್ಕಿ ಹಾಗೂ ರಷ್ಯಾಗೆ ಸಂಬಂಧಿಸಿದ ಎಲ್ಲಾ ಖಾತೆಗಳನ್ನು ತೆಗೆದು ಹಾಕಲಾಗಿದ್ದರೂ ಅವುಗಳಲ್ಲಿನ ಡೇಟಾವನ್ನು ಡೇಟಾಬೇಸ್‌ನಲ್ಲಿ ಸಂಗ್ರಹಿಸಲಾಗುತ್ತದೆ ಎಂದು ಟ್ವಿಟ್ಟರ್ ತಿಳಿಸಿದೆ.








