ಅತ್ಯಾಚಾರ ಸಂತ್ರಸ್ತೆಯ ಕುಟುಂಬಸ್ಥರ ಜೊತೆಗಿನ ಫೋಟೊ ಶೇರ್ ಮಾಡಿದ್ದ ರಾಹುಲ್ ಗಾಂಧಿ – ಟ್ವೀಟ್ ಡಿಲೀಟ್ ಮಾಡಿದ ಟ್ವಿಟರ್
ದೆಹಲಿಯಲ್ಲಿ 9 ವರ್ಷದ ದಲಿತ ಬಾಲಕಿಯ ಮೇಲೆ ಕಾಮುಕರು ಅತ್ಯಾಚಾರವೆಸಗಿ ಕೊಲೆ ಮಾಡಿ ಅಂತ್ಯಸಂಸ್ಕಾರವನ್ನೂ ಮಾಡಿ ಹಾಕಿದ್ದ ಪ್ರಕರಣವನ್ನ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೀವ್ರವಾಗಿ ಖಂಡಿಸಿದ್ದರು.. ಇತ್ತೀಚೆಗೆ ಅವರ ಮನೆಗೆ ಒತೆರಳಿ ಅತ್ಯಾಚಾರ ಸಂತ್ರಸ್ತೆಯ ಕುಟುಂಬಸ್ಥರಿಗೆ ಧೈರ್ಯ ತುಂಬಿದ್ದರು.. ಇದೀಗ ಅವರ ಜೊತೆಗಿನ ಫೋಟೊ ಜೊತೆಗೆ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದರು.. ಈ ಪೋಸ್ಟ್ ಅನ್ನು ಸಾಮಾಜಿಕ ಮಾಧ್ಯಮ ಟ್ವಿಟರ್ ತನ್ನ ವೇದಿಕೆಯಿಂದಲೇ ತೆಗೆದು ಹಾಕಿದೆ.
‘ಈ ಟ್ವೀಟ್ ಇನ್ನು ಮುಂದೆ ಲಭ್ಯವಿರುವುದಿಲ್ಲ’ ಎಂಬ ಪಟ್ಟಿಯನ್ನು ರಾಹುಲ್ ಪೋಸ್ಟ್ಗೆ ಟ್ವಿಟರ್ ಲಗತ್ತಿಸಿದೆ. ದೆಹಲಿಯ ಓಲ್ಡ್ ನಂಗಲ್ ಏರಿಯಾ ಎಂಬಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಕೊಂದ ಮತ್ತು ಸಂತ್ರಸ್ತೆಯನ್ನು ಪೋಷಕರ ಅನುಮತಿ ಇಲ್ಲದೇ ದಹಿಸಿದ ಆರೋಪ ಕೇಳಿ ಬಂದಿತ್ತು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಸಂತ್ರಸ್ತೆ ಕುಟುಂಬಸ್ಥರನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದರು.
ಈ ಬಗ್ಗೆ ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ, ’ಹೆತ್ತವರ ಕಣ್ಣೀರು ಒಂದು ವಿಷಯವನ್ನು ಹೇಳುತ್ತಿದೆ. ಅವರ ಮಗಳು, ಈ ದೇಶದ ಮಗಳು ನ್ಯಾಯಕ್ಕೆ ಅರ್ಹಳು. ನ್ಯಾಯದ ಹಾದಿಯಲ್ಲಿ ನಾನು ಅವರೊಂದಿಗೆ ಇದ್ದೇನೆ, ಎಂದು ಬರೆದುಕೊಂಡಿದ್ದರು. ಆದರೆ, ಆ ಟ್ವೀಟ್ನಲ್ಲಿ ಸಂತ್ರಸ್ತೆ ಕುಟುಂಬಸ್ಥರ ಫೋಟೊಗಳನ್ನೂ ಹಾಕಿದ್ದರು. ಈ ಮೂಲಕ ಸಂತ್ರಸ್ತೆ ಕುಟುಂಬಸ್ಥರ ಗುರುತು ಬಹಿರಂಗಪಡಿಸಿದ ವಿವಾದ ರಾಹುಲ್ ಅವರಿಗೆ ಸುತ್ತಿಕೊಂಡಿತ್ತು.
ಸಂತ್ರಸ್ತೆ ಕುಟುಂಬದ ಫೋಟೊವನ್ನು ಪೋಸ್ಟ್ ಮಾಡಿದ್ದರ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬುಧವಾರ ದೆಹಲಿ ಪೊಲೀಸ್ ಮತ್ತು ಟ್ವಿಟರ್ಗೆ ಆಗ್ರಹಿಸಿತ್ತು. ಇದು ಲೈಂಗಿಕ ಅಪರಾಧಗಳ (ಪೋಕ್ಸೊ) ಕಾಯ್ದೆಯಲ್ಲಿ ಅಪರಾಧ ಎಂದೂ ಅದು ವಾದಿಸಿತ್ತು. ಇದೇ ಹಿನ್ನೆಲೆಯಲ್ಲಿ ಟ್ವೀಟರ್ ಸಂಸ್ಥೆ ರಾಹುಲ್ ಟ್ವೀಟ್ ವಿರುದ್ಧ ಕ್ರಮ ಕೈಗೊಂಡಿದೆ.