ಒಬಾಮ, ಬಿಲ್ ಗೇಟ್ಸ್, ಜೋ ಬಿಡೆನ್, ಆಪಲ್ ಸೇರಿದಂತೆ ಹಲವು ಪ್ರಮುಖರ ಟ್ವಿಟ್ಟರ್ ಹ್ಯಾಕ್
ವಾಷಿಂಗ್ಟನ್, ಜುಲೈ 16: ಆಘಾತಕಾರಿ ಬೆಳವಣಿಗೆಯೊಂದರಲ್ಲಿ, ಜೋ ಬಿಡೆನ್, ಬಿಲ್ ಗೇಟ್ಸ್, ಎಲೋನ್ ಮಸ್ಕ್, ಬರಾಕ್ ಒಬಾಮ, ಮತ್ತು ಆಪಲ್ ಮತ್ತು ಇತರ ಹಲವು ಪ್ರಮುಖ ವ್ಯಕ್ತಿಗಳು ಮತ್ತು ಸಂಸ್ಥೆಗಳು ನಿರ್ವಹಿಸುವ ಟ್ವಿಟ್ಟರ್ ಖಾತೆಗಳು ಹ್ಯಾಕ್ ಆಗಿವೆ. ಇವರ ಟ್ವಿಟರ್ ಖಾತೆಗಳಲ್ಲಿ ಕ್ರಿಪ್ಟೋಕರೆನ್ಸಿ ಹಗರಣವನ್ನು ಉತ್ತೇಜಿಸುವ ಟ್ವೀಟ್‌ಗಳನ್ನು ಪೋಸ್ಟ್ ಮಾಡಿರುವುದು ಕಂಡುಬರುತ್ತದೆ.
ಅಲ್ಲದೆ, ಕಾನ್ಯೆ ವೆಸ್ಟ್, ಕಿಮ್ ಕಾರ್ಡಶಿಯಾನ್, ವಾರೆನ್ ಬಫೆಟ್, ಜೆಫ್ ಬೆಜೋಸ್, ಮತ್ತು ಮೈಕ್ ಬ್ಲೂಮ್‌ಬರ್ಗ್‌ರ ಟ್ವಿಟರ್ ಖಾತೆಗಳಲ್ಲಿ ಬಿಟ್‌ಕಾಯಿನ್ ನೊಂದಿಗಿನ ದೇಣಿಗೆಗಳ ಬಗ್ಗೆ ಟ್ವೀಟ್‌ಗಳನ್ನು ಪೋಸ್ಟ್ ಮಾಡಿವೆ. ಕೆಲವು ಟ್ವೀಟ್‌ಗಳಲ್ಲಿ ಕಾಣಿಸಿಕೊಂಡ ಬಿಟ್‌ಕಾಯಿನ್ ಖಾತೆಯು 320 ಕ್ಕೂ ಹೆಚ್ಚು ವಹಿವಾಟುಗಳನ್ನು ಹೊಂದಿದ್ದು $ 113,000 ಕ್ಕಿಂತ ಹೆಚ್ಚು ಹಣವನ್ನು ಪಡೆದುಕೊಂಡಿದೆ ಮತ್ತು ಟ್ವೀಟ್‌ಗಳನ್ನು ಪೋಸ್ಟ್ ಮಾಡಿದ ಕೆಲವೇ ನಿಮಿಷಗಳಲ್ಲಿ ಇದು ಸಂಭವಿಸಿದೆ.

ಹ್ಯಾಕ್ ಆದ ಎಲ್ಲರ ಟ್ಟಿಟ್ಟರ್ ಗಳಲ್ಲೂ ‘ಈ ವಿಳಾಸಕ್ಕೆ ನೀವು ಇನ್ನು 30 ನಿಮಿಷಗಳಲ್ಲಿ 1000 ಬಿಟ್ ಕಾಯಿನ್ ಕಳುಹಿಸಿದರೆ ನಾನು ನಿಮಗೆ ಅದರ ಎರಡು ಪಟ್ಟನ್ನು ಹಿಂದಿರುಗಿಸುತ್ತೇನೆ’ ಎಂಬ ಪೋಸ್ಟ್ ಗಳನ್ನು ಮಾಡಲಾಗಿದೆ.
ಟ್ವಿಟರ್ ಈ ಸಂಬಂಧ ತನಿಖೆ ನಡೆಸುತ್ತಿದೆ ಮತ್ತು ಅದನ್ನು ಸರಿಪಡಿಸಲು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಪ್ರತಿಕ್ರಿಯೆಗೆ ನೀಡಿದೆ. ಸಮಸ್ಯೆಯ ಗಂಭೀರತೆಯನ್ನು ಅರಿತು ಒಂದು ಗಂಟೆಯೊಳಗೆ ಹ್ಯಾಕ್ ಆದ ಹಲವರ ಖಾತೆಗಳನ್ನು ಲಾಕ್ ಮಾಡಲಾಗಿದ್ದು, ಟ್ವೀಟ್ ಮಾಡುವುದನ್ನು ತಡೆಯಲಾಗಿದೆ ಮತ್ತು ಈ ಮೊದಲು ಮಾಡಲಾದ ಟ್ವಿಟ್ ಗಳನ್ನು ಅಳಿಸಿ ಹಾಕಲಾಗಿದೆ ಎಂದು ಟ್ವಿಟರ್ ತಿಳಿಸಿದೆ








