ಅಹ್ಮದಾಬಾದ್,ಜೂ.7 : ಭಾರತದ ಖ್ಯಾತ ಡೈರಿ ಉತ್ಪನ್ನಗಳ ಉತ್ಪಾದನಾ ಸಂಸ್ಥೆ ಅಮೂಲ್ ಬ್ರಾಂಡ್‌ನ ಅಧಿಕೃತ ಟ್ವಿಟ್ಟರ್ ಖಾತೆಯನ್ನು ಕೆಲವು ಸಮಯಗಳ ಕಾಲ ತಡೆಹಿಡಿದು ನಂತರ ಮರುಸ್ಥಾಪಿಸಲಾಗಿದೆ. ವರದಿಗಳ ಪ್ರಕಾರ, ಎಕ್ಸಿಟ್ ಡ್ರ್ಯಾಗನ್?’ಎಂಬ ಅಡಿಬರಹದೊಂದಿಗೆ ಸಂಸ್ಥೆಯ ಲಾಂಛನವಾಗಿರುವ ‘ಅಮೂಲ್ ಗರ್ಲ್’ನ್ನು ಒಳಗೊಂಡ ಚೀನಿ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಪರೋಕ್ಷವಾಗಿ ಕರೆ ನೀಡುವಂತಿದ್ದ ಕಾರ್ಟೂನ್ ಅನ್ನು ಪೋಸ್ಟ್ ಮಾಡಿದ ಬಳಿಕ ಟ್ವಿಟರ್ ಅಮೂಲ್ ಬ್ರಾಂಡ್‌ನ ಅಧಿಕೃತ ಖಾತೆಯನ್ನು ನಿರ್ಬಂಧಿಸಿದೆ.
ಒಕ್ಕೂಟದ ಆಡಳಿತ ನಿರ್ದೇಶಕ ಆರ್.ಎಸ್.ಸೋಧಿ ಅವರು ಜಾಹೀರಾತು ಏಜೆನ್ಸಿಯು ಗುರುವಾರ ರಾತ್ರಿ ‘ಎಕ್ಸಿಟ್ ಡ್ರ್ಯಾಗನ್?’ಎಂಬ ಬರಹದೊಂದಿಗೆ ಸಂಸ್ಥೆಯ ಲಾಂಛನವಾಗಿರುವ ‘ಅಮೂಲ್ ಗರ್ಲ್’ನ್ನು ಒಳಗೊಂಡ ಕಾರ್ಟೂನ್ ನ್ನು ಪೋಸ್ಟ್ ಮಾಡಿದ ಬಳಿಕ ಟ್ವಿಟರ್ ಅಮೂಲ್ ನ ಖಾತೆಯನ್ನು ನಿರ್ಬಂಧಿಸಿತು. ನಂತರ
ನಾವು ಖಾತೆಯನ್ನು ಸಕ್ರಿಯಗೊಳಿಸುವಂತೆ ಕೋರಿದ ಬಳಿಕ ಟ್ವಿಟರ್ ಖಾತೆಯನ್ನು ಮರುಸ್ಥಾಪಿಸಿದೆ ಎಂದು ಹೇಳಿದ್ದಾರೆ.
ಖಾತೆಯನ್ನು ನಿರ್ಬಂಧಿಸುವ ಬಗ್ಗೆ ಟ್ವಿಟರ್‌ನಿಂದ ನಮಗೆ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ಹೀಗಾಗಿ ಅಮೂಲ್ ಖಾತೆಯನ್ನು ಏಕೆ ತಡೆಹಿಡಿಯಲಾಗಿತ್ತು ಎನ್ನುವುದರ ಬಗ್ಗೆ ನಮಗೆ ತಿಳಿದಿಲ್ಲ. ಅಮೂಲ್ ಖಾತೆಯನ್ನು ಸ್ವಲ್ಪ ಸಮಯ ನಿರ್ಬಂಧಿಸಿದಕ್ಕಾಗಿ ಟ್ವಿಟ್ಟರ್ ನ ವಿವರಣೆಯನ್ನು ಕೋರಿದ್ದೇವೆ ಎಂದು ಅವರು ಮಾಹಿತಿ ನೀಡಿದರು. ಕಾರ್ಟೂನ್ ಜಾಹೀರಾತಿನಲ್ಲಿ ಅಮೂಲ್ ಹುಡುಗಿ ಡ್ರ್ಯಾಗನ್‌ನೊಂದಿಗೆ ಮುಖಾಮುಖಿಯಾಗಿದ್ದು, ಅದರ ಹಿಂದೆ ಟಿಕ್‌ಟಾಕ್‌ನ ಲೋಗೋವನ್ನು ಕಾಣಬಹುದಾಗಿದೆ. ಜಾಹಿರಾತಿನ ಬಲಕ್ಕೆ ಅಮೂಲ್ ಮೇಡ್ ಇನ್ ಇಂಡಿಯಾ ಎಂಬ ಶಬ್ದಗಳಿವೆ.








