ಕೋವಿಡ್ ಸಂಕಷ್ಟದಲ್ಲಿ ಭಾರತದ ಸಹಾಯಕ್ಕೆ ಬoದ ‘ಟ್ವಿಟರ್’ : 110 ಕೋಟಿ ರೂ. ದೇಣಿಗೆ
ನವದೆಹಲಿ : ಭಾರತದಲ್ಲಿ ಕೋವಿಡ್ 2ನೇ ಅಲೆ ಹಿಂದೆಂದಿಗಿಂತಲೂ ಭಯಾನಕವಾಗಿದ್ದು, ದಿನೇ ದಿನೇ ಸೋಂಕಿತರು ಆಕ್ಸಿಜನ್ ಕೊರತೆ , ಬೆಡ್ ಸಿಗದೇ , ಚಿಕಿತ್ಸೆ ಸಿಗದೇ ನರಳಿ ನರಳಿ ಪ್ರಾಣ ಬಿಡುತ್ತಿದ್ದಾರೆ. ಭಾರತ ಸರ್ಕಾರ ಕೊರೊನಾ ನಿರ್ಮೂಲನೆಗೆ ಅನೇಕ ಕ್ರಮಗಳನ್ನ ಕೈಗೊಳ್ತಿದೆ.. ಇತ್ತ ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಹಲವು ದೇಶಗಳು ಭಾರತಕ್ಕೆ ಬೆಂಬಲ ನೀಡುತ್ತಿದ್ದು, ಇದೀಗ ಟ್ವಿಟ್ಟರ್ ಸಂಸ್ಥೆಯು ಸಹ ಭಾರತದ ಜೊತೆ ಕೊರೊನಾ ವಿರುದ್ಧ ಹೋರಾಟದಲ್ಲಿ ಕೈ ಜೋಡಿಸಿದೆ..
ಹೌದು.. ಕೋವಿಡ್ 2ನೇ ಅಲೆ ವಿರುದ್ಧ ಹೋರಾಟ ನಡೆಸಿರುವ ಭಾರತಕ್ಕೆ ಮೈಕ್ರೋ ಬ್ಲಾಗಿಂಗ್ ಸೋಶಿಯಲ್ ಮೀಡಿಯಾ ಆದ ಟ್ವಿಟರ್ ಸಂಸ್ಥೆ 110 ಕೋಟಿ ರೂಪಾಯಿ ಆರ್ಥಿಕ ನೆರವು ನೀಡಿದೆ. ಭಾರತದಲ್ಲಿ ವೈದ್ಯಕೀಯ ನೆರವು ನೀಡಲು ಮೂರು ಸರ್ಕಾರೇತರ ಸಂಸ್ಥೆಗಳಿಗೆ ಈ ದೇಣಿಗೆ ನೀಡಿಲಾಗಿದೆ ಎಂದು ಟ್ವಿಟರ್ ಇಂಕ್ ನ CEO ಜಾಕ್ ಪ್ಯಾಟ್ರಿಕ್ ಟ್ವೀಟ್ ಮಾಡಿದ್ದಾರೆ.
ಭಾರತದಲ್ಲಿಂದು ಕೊರೊನಾ ಅಬ್ಬರ ತುಸು ಕಗ್ಗಿದಂತೆ ಕಾಣುತ್ತಿದ್ದು, ಕಳೆದ 24 ಗಂಟೆಗಳಲ್ಲಿ 3,29,942 ಕೋವಿಡ್ ಪ್ರಕರಣಗಳು ವರದಿಯಾಗಿವೆ. ಕಳೆದೊಂದು ವಾರಕ್ಕೆ ಹೋಲಿಸಿದರೆ ಇದೇ ಮೊದಲ ಬಾರಿಗೆ ಸೋಂಕಿತರ ಸಂಖ್ಯೆ ಕಡಿಮೆಯಾಗಿದೆ. ಕೇಂದ್ರ ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ, ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 3,29,942 ಕೋವಿಡ್ ಕೇಸ್ ಗಳು ಪತ್ತೆಯಾಗಿದ್ದು,
3,876 ಮಂದಿ ಮಾರಕ ಸೋಂಕಿನಿಂದ ಉಸಿರು ನಿಲ್ಲಿಸಿದ್ದಾರೆ. ಇದರೊಂದಿಗೆ ದೇಶದಲ್ಲಿ ಒಟ್ಟಾರೆ ಕೊರೊನಾ ಸೋಂಕಿತರ ಸಂಖ್ಯೆ 2,29,92,517 ಹಾಗೂ ಮೃತರ ಸಂಖ್ಯೆ 2,49,992ಕ್ಕೆ ಹೆಚ್ಚಳವಾಗಿದೆ.
ಇನ್ನು ನಿನ್ನೆ ಒಂದೇ ದಿನ 3,56,082 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದು, ಈವರೆಗೆ ಒಟ್ಟು 1,90,27,304 ಸೋಂಕಿತರು ಗುಣಮುಖರಾಗಿ, ಆಸ್ಪತ್ರೆಯಿಂದ ಹೊರಬಂದಿದ್ದಾರೆ. ಭಾರತದಲ್ಲೀಗ 37,15,221 ಕೊರೊನಾ ಕೇಸ್ ಗಳು ಸಕ್ರಿಯವಾಗಿವೆ.








