twitter introducing a new feature of voice message
ಟ್ವಿಟ್ಟರ್ ಪರಿಚಯಿಸುತ್ತಿದೆ ‘ವಾಯ್ಸ್ ಫೀಚರ್’ : ಇದರ ವಿಶೇಷತೆಗಳೇನು ಗೊತ್ತಾ..!
ನವದೆಹಲಿ: ಟ್ವಿಟ್ಟರ್… ಸದ್ಯ ವಿಶ್ವದ ಜನಪ್ರಿಯ ಸಾಮಾಜಿಕ ಜಾಲತಾಣ. ಹೊಸ ಹೊಸ ಅಪ್ ಡೇಟ್ಸ್ ಗಳನ್ನ ಆಗಾಗ ಟ್ವಿಟ್ಟರ್ ತನ್ನ ಬಳಕೆದಾರರಿಗೆ ಪರಿಚಯಿಸುತ್ತಲೇ ಇರುತ್ತೆ. ಇದೀಗ ಮತ್ತೆ ಹೊಸ ಫೀಚರ್ ಗಳನ್ನು ಪರಿಚಯಿಸುತ್ತಿರುವ ಟ್ವಿಟ್ಟರ್ ಇದೀಗ ತನ್ನ ಡೈರೆಕ್ಟ್ ಮೆಸೇಜಸ್ ಫ್ಲ್ಯಾಟ್ ಫಾರ್ಮ್ ನಲ್ಲಿ ವಾಯ್ಸ್ ಮೆಸೇಜಿಂಗ್ ಆಯ್ಕೆಯನ್ನು ನೀಡಲು ಮುಂದಾಗಿದೆ.
ಹೌದು ಇಂದಿನಿಂದ (ಫೆ.17) ಹಂತಹಂತವಾಗಿ ವಾಯ್ಸ್ ಮೆಸೇಜ್ ಫೀಚರ್ ಭಾರತ, ಬ್ರೆಜಿಲ್ ಮತ್ತು ಜಪಾನ್ ದೇಶಗಳಲ್ಲಿ ಪರೀಕ್ಷೆಗೊಳಪಡಲಿದೆ. ವಾಯ್ಸ್ ಮೆಸೇಜ್ ಆಯ್ಕೆಯು ಬಳಕೆದಾರರಿಗೆ ವಾಯ್ಸ್ ಟ್ವೀಟ್ ಮತ್ತು ವಾಯ್ಸ್ ನೋಟ್ಸ್ ಕಳುಹಿಸಲು ಅವಕಾಶ ಮಾಡಿಕೊಡುತ್ತದೆ. ಈ ಫೀಚರ್ ಅನ್ನು ಟ್ವಿಟ್ಟರ್ ಕಳೆದ ವರ್ಷವೇ ಪರಿಚಯಿಸಿತ್ತು, ಆದರೇ ಅಧಿಕೃತವಾಗಿ ಜಾರಿಗೆ ಬಂದಿರಲಿಲ್ಲ. ಇಂದಿನಿಂದ ಹಂತಹಂತವಾಗಿ ಬಳಕೆದಾರರು ಧ್ವನಿ ಸಂದೇಶವನ್ನು ಕಳುಹಿಸಬಹುದಾಗಿದ್ದು, ಪ್ರತಿಯೊಂದು ವಾಯ್ಸ್ ಮೆಸೇಜ್ ಗೆ 140 ಸೆಕೆಂಡುಗಳ ಕಾಲವಕಾಶ ನೀಡಲಾಗಿದೆ.
ರಾಯಲ್ ಎನ್ ಫೀಲ್ಡ್ ಮೀಟಿಯೋರ್ 350 ಬೈಕ್ ಲಾಂಚ್ : ಫೀಚರ್ಸ್ ..!
ಈ ಟೆಸ್ಟಿಂಗ್ ಫೀಚರ್ ಆಯಂಡ್ರಾಯ್ಡ್ ಮತ್ತು IOS ಬಳಕೆದಾರರಿಗೆ ಲಭ್ಯವಾಗಲಿದೆ. ಇದು ಟ್ವೀಟಿಗರಿಗೆ ಮತ್ತಷ್ಟು ಅನುಕೂಲವನ್ನು ಒದಗಿಸಿ ಕೊಡಲಿದ್ದು, ವಾಟ್ಸಾಪ್ ವಾಯ್ಸ್ ಫೀಚರ್ ಮಾದರಿಯಲ್ಲೆ ಕಾರ್ಯನಿರ್ವಹಿಸಲಿದೆ. ಗಮನಿಸಬೇಕಾದ ಸಂಗತಿಯೆಂದರೇ ಯಾವುದೇ ವಾಯ್ಸ್ ಮೆಸೇಜ್ ಕಳುಹಿಸುವ ಮೊದಲು ಅದನ್ನೊಮ್ಮೆ ಪರಿಶೀಲಿಸಬಹುದು. ಐಓಎಸ್ ಬಳಕೆದಾರರಿಗೆ ವಾಯ್ಸ್ ರೆಕಾರ್ಡ್ ಅನ್ನು ಹೋಲ್ಡ್ ಮತ್ತು ಕಂಟಿನ್ಯೂ ಮಾಡುವ ಅವಕಾಶ ನೀಡಲಾಗಿದೆ. ಇದರ ಹೊರತಾಗಿ ವೆಬ್ ಬ್ರೌಸರ್ ಬಳಸುವವರು ಕೂಡ ವಾಯ್ಸ್ ಮೆಸೇಜ್ ಅನ್ನು ಕೇಳುವ ಅವಕಾಶ ನೀಡಲಾಗಿದೆ.
ಅಂಚೆ ಕಚೇರಿಯಲ್ಲಿ ನಿಮ್ಮ ವಿದ್ಯುತ್ ಬಿಲ್ ಪಾವತಿ ಮಾಡಬಹುದು..! ಹೇಗೆ ನೋಡಿ..!
twitter introducing a new feature of voice message








