Twitter Vs Koo – ಟ್ವಿಟ್ಟರ್ ಬಿಟ್ಟ ಉದ್ಯೋಗಿಗಳಿಗೆ #Koo ಆಫರ್..!!
ಟ್ವಿಟ್ಟರ್ ಒಡೆತನ ವಿಶ್ವದ ಶ್ರೀಮಂತ ದ್ಯಮಿ ಲಾಮ್ ಮಸ್ಕ್ ( Elon Musk) ಕೈ ಸೇರಿದಾಗಿನಿಂದ ಒಂದಲ್ಲಾ ಒಂದು ವಿವಾದಲ್ಲಿ ಸಿಲುಕುತ್ತಲೇ ಇದೆ.. ಬಳಕೆದಾರರು #twitter ನಿಂದ , ಅದರ ಹೊಸ ಹೊಸ ನಿಯಮಗಳು , ಅಪ್ ಡೇಟ್ ಗಳಿಂದ ರೋಸಿ ಹೋಗುತ್ತಿದ್ದಾರೆ.. ಟ್ವಿಟ್ಟರ್ ನಲ್ಲೇ #RIPtwitter ಟ್ರೆಂಡ್ ಆಗ್ತಿರೋದು ಗಮನಾರ್ಹ..!!
ಆದ್ರೆ ಇದರಿಂದ ನಮ್ಮ ದೇಶೀಯ ಆಪ್ #koo ಗೆ ಲಾಭವೂ ಆಗುತ್ತಿದೆ.. ಹೆಚ್ಚು ಜನರು ಇದೀಗ ಟ್ವಿಟ್ಟರ್ ಗೆ ಬಾಯ್ ಬಾಯ್ ಹೇಳಿ ಕೂ ಕಡೆ ಮುಖ ಮಾಡ್ತಿದ್ದಾರೆ..
ಅಷ್ಟೇ ಅಲ್ಲ ಇನ್ನಷ್ಟು ಬಳಕೆದಾರರನ್ನ ಸೆಳೆಯಲು ಕೂ ಕೂಡ ಹೊಸ ಹೊಸ ಫರ್ ಗಳನ್ನ ನೀಡುತ್ತಿದೆ..
ಅಂದ್ಹಾಗೆ ಟ್ವಿಟ್ಟರ್ ಸಂಸ್ಥೆಯಿಂದ ಸುಮಾರು 3000 ಜನರನ್ನ ಕೆಲಸದಿಂದ ಗಾಗಲೇ ವಜಾಗೊಳಿಸಲಾಗಿದ್ದು , ಇದೀಗ ಟ್ವಿಟ್ಟರ್ ಉದ್ಯೋಗಿಗಳು ಕೂ ಜೊತೆಗೆ ಕೈ ಜೋಡಿಸಲು ಮುಂದಾಗ್ತಿದ್ದಾರೆ…
ಟ್ವಿಟ್ಟರ್ ಬಿಟ್ಟ ಉದ್ಯೋಗಿಗಳನ್ನು ಶೀಘ್ರದಲ್ಲೇ ನಾವು ನೇಮಿಸಿಕೊಳ್ಳುತ್ತೇವೆ ಎಂದು ಭಾರತದ ಮೈಕ್ರೋಬ್ಲಾಗಿಂಗ್ ಪ್ಲಾಟ್ ಫಾರ್ಮ್ ಕೂ ಹೇಳಿದೆ. ಕೂ ಸಹ-ಸಂಸ್ಥಾಪಕ ಮಯಾಂಕ್ ಬಿಡವಟ್ಕ ಟ್ವೀಟ್ ಮಾಡುವ ಮೂಲಕ ಟ್ವಿಟರ್ ನ ಮಾಜಿ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಮುಂದಾಗಿದ್ದೇವೆ ಎಂದು ಹೇಳಿದ್ದಾರೆ.