ಲಾಕ್ ಡೌನ್ ಕಾರಣದಿಂದ ತನ್ನ ಕಚೇರಿಗಳನ್ನು ಸೆಪ್ಟೆಂಬರ್ ಮೊದಲು ತೆರೆಯುವ ಸಾಧ್ಯತೆಯಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ಟ್ವಿಟರ್ ತಿಳಿಸಿದೆ. ಕೊರೋನಾ ಸೋಂಕಿನ ಕಾರಣದಿಂದ ಜಾರಿಯಲ್ಲಿರುವ ಲಾಕ್ ಡೌನ್ ಅವಧಿ ಮುಗಿದ ಬಳಿಕವೂ ತನ್ನ ಹಲವಾರು ಉದ್ಯೋಗಿಗಳಿಗೆ ಮನೆಯಿಂದಲೇ ಶಾಶ್ವತವಾಗಿ ಕೆಲಸ ಮಾಡಲು ಅನುಮತಿ ನೀಡಲಾಗುವುದು ಎಂದು ಟ್ವಿಟರ್ ತಿಳಿಸಿದೆ.
ಕೊರೋನಾ ಸೋಂಕು ಕಾಣಿಸಿಕೊಂಡ ತಕ್ಷಣವೇ ತನ್ನ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡುವಂತೆ ಸೂಚಿಸಿದ ಟ್ವಿಟರ್ ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಕಂಪೆನಿಯಾಗಿದೆ. ಇದೀಗ ಶಾಶ್ವತವಾಗಿ ಮನೆಯಿಂದಲೇ ಕೆಲಸ ಮಾಡಲು ತನ್ನ ಉದ್ಯೋಗಿಗಳಿಗೆ ಅನುಮತಿ ನೀಡಲಾಗುವುದು ಎಂದು ಕಂಪನಿ ತಿಳಿಸಿದೆ.
ಕೆಲವು ತಿಂಗಳಿನಿಂದ ಮನೆಯಿಂದಲೇ, ತಮ್ಮ ಉದ್ಯೋಗವನ್ನು ನಿಭಾಯಿಸಬಲ್ಲೆವು ಎಂದು ಉದ್ಯೋಗಿಗಳು ನಿರೂಪಿಸಿದ್ದಾರೆ. ಇಂತಹ ಕಠಿಣ ಬಿಕ್ಕಟ್ಟಿನ ನಡುವೆಯೂ ನಮಗೆ ತ್ವರಿತವಾಗಿ ಪ್ರತಿಕ್ರಿಯಿಸಲು ಸಾಧ್ಯವಾಗಿದೆ. ಆದುದರಿಂದ ನಮ್ಮ ಸಂಸ್ಥೆಯ ಉದ್ಯೋಗಿಗಳು ವರ್ಕ್ ಫ್ರಂ ಹೋಮ್ ಗೆ ಒಲವು ತೋರಿದರೆ ಅದನ್ನು ಮುಂದುವರಿಸಲಾಗುವುದು ಎಂದು ಟ್ವಿಟ್ಟರ್ ವಕ್ತಾರರು ತಿಳಿಸಿದ್ದಾರೆ.
ಫೇಸ್ ಬುಕ್ ಮತ್ತು ಗೂಗಲ್ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳ ದಿಗ್ಗಜರು ಈ ವರ್ಷದ ಕೊನೆಯವರೆಗೂ ಮನೆಯಿಂದಲೇ ಕೆಲಸ ಮಾಡುವುದನ್ನು ಮುಂದುವರೆಸುವ ಇಚ್ಚೆಯನ್ನು ವ್ಯಕ್ತಪಡಿಸಿದೆ ಎಂದು ವರದಿಗಳು ತಿಳಿಸಿದೆ.
ಬೋಟ್ ದುರಂತ; ನಾಪತ್ತೆಯಾಗಿದ್ದ ಬಾಲಕ ಪತ್ತೆ
ಮುಂಬಯಿ: ಇತ್ತೀಚಿಗಷ್ಟೇ ಮುಂಬಯಿ ಕರಾವಳಿಯಲ್ಲಿ (Mumbai) ನಡೆದ ಬೋಟ್ ಅಪಘಾತದಲ್ಲಿ 13 ಜನರು ದಾರುಣವಾಗಿ ಸಾವನ್ನಪ್ಪಿರುವ ಘನಟೆ ನಡೆದಿತ್ತು. ಅಲ್ಲದೇ 7 ವರ್ಷದ ಬಾಲಕ ನಾಪತ್ತೆಯಾಗಿದ್ದ. ಈಗ...