Twitter: ತಪ್ಪಾದ ಟ್ವೀಟ್ ಎಡಿಟ್ ಮಾಡಿ – ಹೊಸ ಫೀಚರ್ ಪರಿಚಯಿಸಿದ ಟ್ವೀಟರ್..
ಟ್ವೀಟರ್ ನಲ್ಲಿ ಅತಿ ಹೆಚ್ಚು ಮನವಿ ಮಾಡಲಾಗಿದ್ದ ವೈಶಿಷ್ಯವೊಂದನ್ನ ಕೊನೆಗೂ ಟ್ವೀಟರ್ ಅಳವಡಿಸಿಕೊಂಡಿದೆ ಅಷ್ಟೆ ಅಲ್ಲದೆ ಅದನ್ನ ಬಳಕೆದಾರರಿಗೂ ಪರಿಚಯಿಸುತ್ತಿದೆ.
ಟ್ವೀಟರ್ ನಲ್ಲಿ ತಪ್ಪಾಗಿ ಪೋಸ್ಟ್ ಮಾಡಿದಾಗ ಅದನ್ನ ಮತ್ತೊಮ್ಮೆ ಎಡಿಟ್ ಮಾಡಲು ಅವಕಾಶ ಬೇಕು ಎಂದು ಟ್ವೀಟರ್ ಗೆ ಹಲವು ಭಾರಿ ಬಳಕೆದಾರರು ಮನವಿ ಮಾಡಿದ್ದರು ಅದರಂತೆಯೇ ಟ್ವಿಟರ್ ಅನ್ನು ಇನ್ನಷ್ಟು ಬಳಕೆ ಸ್ನೇಹಿ ಮಾಡಲು ಎಡಿಟ್(ಸಂಪಾದನೆ) ಬಟನ್ ಅವಕಾಶವನ್ನ ಕಲ್ಪಿಸುತ್ತಿದೆ.
ಈ ಬಗ್ಗೆ ಟ್ವೀಟ್ ಮಾಡಿ ತಿಳಿಸಿರುವ ಕಂಪನಿ, ಬಳಕೆದಾರರ ಮನವಿಯ ಮೇರೆಗೆ ಟ್ವಿಟರ್ನಲ್ಲಿ ಎಡಿಟ್ ಬಟನ್ ಆಪ್ಷನ್ ಅನ್ನು ನೀಡಲು ಟೆಸ್ಟಿಂಗ್ ನಡೆಯುತ್ತಿವೆ. ಶೀಘ್ರದಲ್ಲೇ ಅದು ಬಳಕೆದಾರರಿಗೆ ಸಿಗಲಿದೆ ಎಂದು ತಿಳಿಸಿದೆ.
ಆದರೇ ಟ್ವಿಟರ್ ಪರಿಚಯಿಸುತ್ತಿರುವ ಎಡಿಟ್ ಬಟನ್ ಫೀಚರ್ಸ್ ಎಲ್ಲ ಬಳಕೆದಾರರಿಗೆ ಲಭ್ಯವಿರುವುದಿಲ್ಲ ಎಂದು ಕಂಪನಿ ಹೇಳಿದೆ. ಈ ಬಟನ್ ಬೇಕಾದಲ್ಲಿ ಹಣ ಪಾವತಿಸಿ ಚಂದಾದಾರಿಕೆ ಪಡೆಯಬೇಕು. ಆರಂಭದಲ್ಲಿ ಇದನ್ನು ಬ್ಲೂ ಚಂದಾದಾರರಿಗೆ ಮಾತ್ರ ನೀಡಲಾಗುತ್ತದೆ ಎಂದು ಟ್ವೀಟರ್ ಹೇಳಿದೆ.
ಇನ್ನು ಎಡಿಟ್ ಬಟನ್ ಪರಿಚಯಿಸಿದ ಮೇಲೂ ಟ್ವೀಟರ್ ಹಲವು ಕರಾರುಗಳನ್ನ ಹಾಕಿದೆ. ಯಾವುದೇ ಟ್ವೀಟ್ ಅನ್ನು ಪ್ರಕಟಿಸಿ ಅರ್ಧಗಂಟಯೊಳಗೆ (30 ನಿಮಿಷ) ಮಾತ್ರ ಅದನ್ನು ಪರಿಷ್ಕರಿಸಲು ಸಾಧ್ಯ. ಎಡಿಟ್ ಮಾಡಿದ ಬಳಿಕ ಅದು ಹಳೆಯ ಟ್ವೀಟ್ ಜೊತೆಗೆ ಗೋಚರಿಸುತ್ತದೆ ಎಂದು ಟ್ವೀಟರ್ ಹೇಳಿದೆ.








