ಸುಶಾಂತ್ ಸಾವಿನ ಬಳಿಕ ದೊಡ್ಡ ದೊಡ್ಡ ಮಂದಿಯ ಸತ್ಯವನ್ನು ಬಯಲಿಗೆಳೆಯುತ್ತಾ ಸುದ್ದಿಯಲ್ಲಿರುವ ಕಂಗನಾರ ಬಂಧನಕ್ಕೆ ಇದೀಗ ಟ್ವಿಟ್ಟರ್ ನಲ್ಲಿ ಟ್ರೆಂಡ್ ಶುರುವಾಗಿದೆ.
ಹೌದು ಸುಶಾಂತ್ ಸಾವು ಆತ್ಮಹತ್ಯೆಯಲ್ಲ ಕೊಲೆ ಎಂದು ಹಲವರ ವಿರುದ್ಧ ನೇರವಾಗಿಯೇ ಆರೋಪ ಮಾಡುತ್ತಿರುವ ಕಂಗನಾ ಬಾಲಿವುಡ್ ನ ಕರಾಳ ಸತ್ಯವನ್ನು ಜಗತ್ ಜಾಹೀರು ಮಾಡುವಲ್ಲಿ ತೊಡಗಿದ್ದಾರೆ. ಇದೀಗ ಅವರ ಬಂಧನಕ್ಕೆ ಟ್ರೆಂಡ್ ಶುರುವಾಗಿದೆ. #arrestkanganaranaut ಹ್ಯಾಶ್ ಟ್ಯಾಗ್ ಟ್ರೆಂಡ್ ಆಗಿದೆ. ಈ ಟ್ರೆಂಡ್ ಶುರುಮಾಡಿರುವವರು ಬೇರೆ ಯಾರೂ ಅಲ್ಲ ಸ್ವತಃ ಕಂಗನಾ ಟೀಂ..! ಅಷ್ಟಕ್ಕೂ ಇದಕ್ಕೆ ಕಾರಣವೇನು ಗೊತ್ತಾ..?
ಬಾಲಿವುಡ್ ನ ಅಸಲಿ ಮುಖವಾಡ ಕಳಚುತ್ತಿರುವ ಕಂಗನಾಗೆ ಸಾಕಷ್ಟು ಸತ್ಯ ಗೊತ್ತಿದೆ, ಅವರನ್ನು ಅರೆಸ್ಟ್ ಮಾಡಿದರೆ ಎಲ್ಲಾ ಸತ್ಯಗಳು ಹೊರಬರಲಿವೆ ಎನ್ನುವ ಕಾರಣಕ್ಕೆ ಕಂಗನಾ ಅವರನ್ನು ಅರೆಸ್ಟ್ ಮಾಡಿ ಎಂಬ ಒತ್ತಾಯಗಳು ಈಗ ಜೋರಾಗಿದೆ. ಕಂಗನಾ ರಣಾವತ್ ಟೀಂ ಎನ್ನುವ ಖಾತೆಯಿಂದ ಈ ಟ್ವೀಟ್ ಬಂದಿದ್ದು, ಅನೇಕರು ಬೆಂಬಲ ಸೂಚಿಸುತ್ತಿದ್ದಾರೆ. ಹ್ಯಾಶ್ ಟ್ಯಾಗ್ ಬಳಸಿ ಕಂಗನಾ ಬಂಧನಕ್ಕೆ ಒತ್ತಾಯ ಮಾಡುತ್ತಿದ್ದಾರೆ. “ಕಂಗನಾರ ಮೇಲೆ ಹಲ್ಲೆ ನಡೆಸಿ, ಅವರ ವಿರುದ್ಧ ಹಿಂದಿನಿಂದ ಪಿತೂರಿ ಮಾಡುವ ಬದಲು, ಹಾಲು ಕುಡಿಯುವ ಎಲ್ಲಾ ಚಿಂಗು ಮಿಂಗು ಗ್ಯಾಂಗ್ ಅನ್ನು ಅರೆಸ್ಟ್ ಮಾಡುವ ಮೂಲಕ ಕಂಗನಾಗೆ ಧೈರ್ಯ ತುಂಬಬೇಕು. ಹೊರಗಿನವರ ಕಿರುಕುಳಕ್ಕೆ ಕನಿಷ್ಠ ಕಾರಣವನ್ನು ನಾವು ತಿಳಿಯುತ್ತೇವೆ ದಯವಿಟ್ಟು ಕಂಗನಾರನ್ನು ಅರೆಸ್ಟ್ ಮಾಡಿ” ಎಂದು ಕಂಗನಾ ಬಣ ಒತ್ತಾಯಿಸಿದೆ. 








