ವಿದ್ಯುತ್ ಶಾಕ್ ಹೊಡೆದು ಸಹೋದರರಿಬ್ಬರು ಸಾವು belagavi saaksha tv
ಬೆಳಗಾವಿ : ವಿದ್ಯುತ್ ಶಾಕ್ ಹೊಡೆದು ಸಹೋದರರಿಬ್ಬರು ಮೃತಪಟ್ಟಿರುವ ಘಟನೆ ರಾಯಬಾಗ ತಾಲೂಕಿನ ನಿಲಜಿ ಗ್ರಾಮದಲ್ಲಿ ನಡೆದಿದೆ.
25 ವರ್ಷದ ರಾಜು ಬಾಳಪ್ಪ ಬಡಿಗೇರ ಹಾಗೂ 26 ವರ್ಷದ ಶಂಕರ್ ರಾಮಪ್ಪ ಬಡಿಗೇರ ಮೃತ ಸಹೋದರರು.
ಇವರು ಎಂದಿನಂತೆ ಇಂದು ಬೆಳಗ್ಗೆ ಹೊಲಕ್ಕೆ ನೀರು ಹಾಯಿಸಲು ಬಾವಿಯ ಮೋಟರ್ ಪ್ರಾರಂಭಿಸುವಾಗ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಸಹೋದರರು ಸಾವಿಗೀಡಾಗಿದ್ದಾರೆ.
ಇನ್ನು ವಿಷಯ ತಿಳಿದು ಸ್ಥಳಕ್ಕೆ ಕುಡಚಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇತ್ತ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.









