ತುಮಕೂರು: ಕೊರಟಗೆರೆ ತಾಲ್ಲೂಕಿನ ಅಕ್ಕಿರಾಂಪುರ ಕೆರೆಯಲ್ಲಿ ಈಜಲು ಹೋಗಿದ್ದ ಐವರು ಬಾಲಕರಲ್ಲಿ ಇಬ್ಬರು ನೀರುಪಾಲಾದ ಘಟನೆ ನಡೆದಿದೆ.
ಅಕ್ಕಿರಾಂಪುರ ಬಳಿ ಇರುವ ಹೊಸಹಳ್ಳಿ ಗ್ರಾಮದ ರಮೇಶ್ ಎಂಬುವರ ಪುತ್ರ ಸತೀಶ್(15), ಹನುಮಂತರಾಯಪ್ಪ ಎಂಬುವರ ಪುತ್ರ ನಂದನ್ ಕುಮಾರ್ (16) ಮೃತ ದುರ್ದೈವಿಗಳು.
ಒಟ್ಟು ಐದು ಜನ ಸ್ನೇಹಿತರು ಅಕ್ಕಿರಾಂಪುರ ಕೆರೆಯಲ್ಲಿ ಈಜಲು ತೆರಳಿದ್ದರು. ಮೊದಲು ಸರಿಯಾಗಿ ಬಾರದ ಸತೀಶ ನೀರಿನಲ್ಲಿ ಮುಳುಗಿದ್ದಾನೆ. ಆತನನ್ನು ಉಳಿಸಲು ಧಾವಿಸಿದ ನಂದನ್ ಕುಮಾರ್ ಸಹ ಆಳವಾದ ಗುಂಡಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.
ಈ ಇಬ್ಬರೂ ಸ್ನೇಹಿತರು ಮುಳುತ್ತಿರುವುದನ್ನು ಗಮನಿಸಿದ ಮತ್ತೋರ್ವ ಸ್ನೇಹಿತ ಆಕಾಶ್, ಈ ಇಬ್ಬರ ನೆರವಿಗೆ ಧಾವಿಸಿದ್ದಾನೆ. ಆಗ ಅಪಾಯ ಮುನ್ಸೂಚನೆ ಅರಿತ ಜೊತೆಯಲ್ಲಿದ್ದ ಮತ್ತೋರ್ವ ಮಧುಸೂದನ್ ಎಂಬಾತ ಆಕಾಶ್‍ನನ್ನು ಹಿಂದಕ್ಕೆ ಎಳೆದು ಪ್ರಾಣಾಪಾಯದಿಂದ ಪಾರು ಮಾಡಿದ್ದಾನೆ.
ಘಟನೆಯಲ್ಲಿ ಇಬ್ಬರು ಬಾಲಕರು ಮೃತಪಟ್ಟಿದ್ದು, ಮೂವರು ಬಾಲಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಾಲಕ ನಂದಕುಮಾರ್ ಶವವನ್ನು ಮೇಲೆತ್ತಲಾಗಿದ್ದು, ಮತ್ತೊರ್ವ ಸತೀಶ್ ಶವಕ್ಕಾಗಿ ಶೋಧ ಕಾರ್ಯ ನಡೆಯುತ್ತಿದೆ.
ಈ ಘಟನೆಗೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯ ಕಾರಣ ಎಂದು ಸ್ಥಳದಲ್ಲಿ ಸೇರಿದ್ದ ಗ್ರಾಮಸ್ಥರು ತೀವ್ರ ಆಕ್ರೋಶ ಹೊರಹಾಕಿದ್ದಾರೆ
ಅಕ್ಕಿರಾಂಪುರ ಕೆರೆಯ ಏರಿ ಕಾಮಗಾರಿ ವೇಳೆ ಗುತ್ತಿಗೆದಾರರು ಅನಧಿಕೃತವಾಗಿ ಕೆರೆಯಲ್ಲಿ ಆಳವಾದ ಗುಂಡಿಗಳನ್ನು ತೆಗೆದಿದ್ದ ಕಾರಣ ಈಜಲು ಹೋಗಿದ್ದ ಬಾಲಕರು ಆಳವಾದ ಗುಂಡಿಯಲ್ಲಿ ಸಿಲುಕಿ ಸಾವನ್ನಪ್ಪಿದ್ದಾರೆ ಎಂದು ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.
ಸ್ಥಳಕ್ಕೆ ಸ್ಥಳೀಯ ಕೊರಟಗೆರೆ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿ ಕಾರ್ಯಾಚರಣೆ ಮುಂದುವರೆಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel