ಅ. 23 ರಿಂದ ಎರಡು ದಿನಗಳ ಕಿತ್ತೂರು ಉತ್ಸವ ಆಚರಣೆ Kittur uthsava saaksha tv
ಬೆಳಗಾವಿ : ಅಕ್ಟೋಬರ್ 23 ಹಾಗೂ 24 ರಂದು ಎರಡು ದಿನಗಳ ಕಾಲ ಕಿತ್ತೂರು ಉತ್ಸವವನ್ನು ಆಚರಿಸಲಾಗುವುದು ಎಂದು ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ.
ಕಿತ್ತೂರು ಉತ್ಸವ 2021 ಕುರಿತ ಪೂರ್ವಭಾವಿ ಸಭೆಯಲ್ಲಿ ಇಂದು ಸಚಿವರಾದ ಗೋವಿಂದ ಕಾರಜೋಳ ಅವರು ಭಾಗಿಯಾಗಿದ್ದರು.
ಈ ವೇಳೆ ಅಧಿಕಾರಿಗಳೊಂದಿಗೆ ಕಿತ್ತೂರು ಉತ್ಸವದ ಬಗ್ಗೆ ಚರ್ಚಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿ ಚೆನ್ನಮ್ಮನ ಕಿತ್ತೂರು ಉತ್ಸವವನ್ನು ಮೂರು ದಿನಗಳ ಬದಲಾಗಿ ಎರಡು ದಿನಗಳಲ್ಲಿ ಆಚರಿಸಲಾಗುವುದು.
ಅಕ್ಟೋಬರ್ 23 ಹಾಗೂ 24 ರಂದು ಎರಡು ದಿನಗಳ ಉತ್ಸವ ಹಮ್ಮಿಕೊಂಡು ಕಿತ್ತೂರಿನ ಗತವೈಭವ ಅನಾವರಣಗೊಳಿಸುವಂತೆ ಅರ್ಥಪೂರ್ಣವಾಗಿ ಉತ್ಸವ ಆಚರಿಸಲಾಗುವುದು.
ಕೋವಿಡ್ ಭೀತಿ ಇನ್ನೂ ಇದೆ. ಮೂರನೇ ಅಲೆಯ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಆದ್ದರಿಂದ ಇದನ್ನು ಗಮನದಲ್ಲಿಟ್ಟುಕೊಂಡು ಎಚ್ಚರಿಕೆಯಿಂದ ಉತ್ಸವ ಆಚರಿಸಬೇಕಿದೆ ಎಂದರು.