ಕಾರು ಪಲ್ಟಿಯಾಗಿ ಇಬ್ಬರು ಸ್ಥಳದಲ್ಲೇ ಸಾವು karwar saaksha tv
ಕಾರವಾರ : ಚಾಲಕನ ನಿಯಂತ್ರಣ ತಪ್ಪು ಕಾರು ಪಲ್ಟಿಯಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲೂಕಿನ ಅಮ್ಮಾಜಿ ಕೆರೆ ಬಳಿ ನಡೆದಿದೆ.
ಮುಂಡಗೋಡು ತಾಲೂಕಿನ ಅರಶಿಣಗೇರಿಯ ರಾಜು ವರ್ಗಿಸ್ ಹಾಗೂ ಬ್ಲೆಸ್ಸಿ ಮೃತಪಟ್ಟ ದಂಪತಿಗಳಾಗಿದ್ದಾರೆ.
ಇವರು ಇಂದು ಬೆಳಗಿನ ಜಾವ ಸಂಬಂಧಿಕರ ಮಣ್ಣಿಗೆ ಎಂದು ಕಾರಿನಲ್ಲಿ ತೆರಳಿದ್ದರು.
ಈ ವೇಳೆ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾಗಿ ಪಕ್ಕದಲ್ಲಿದ್ದ ಕೆರೆಗೆ ಬಿದ್ದಿದೆ.
ನೀರಿನಲ್ಲಿ ಕಾರು ಸಿಲುಕಿಕೊಂಡ ಕಾರಣ ಕಾರಿನ ಡೋರ್ ತೆರೆಯಲಾರದೆ ದಂಪತಿ ಕೊನೆಯುಸಿರೆಳೆದಿದ್ದಾರೆ.
ಇನ್ನು ಈ ಘಟನೆ ಸಂಬಂಧ ಮುಂಡಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.