ಹೋಳಿ ಆಚರಣೆ ವೇಳೆ ಘರ್ಷಣೆ – ಇಬ್ಬರ ಬಲಿ 6 ಮಂದಿಗೆ ಗಾಯ
ಉತ್ತರ ಪ್ರದೇಶದ ಅಮೆಥಿಯ ಹಳ್ಳಿಯೊಂದರಲ್ಲಿ ಹೋಳಿ ಆಚರಿಸುವ ವಿವಾದ ಉಂಟಾಗಿದ್ದು , ನಂತರ ನಡೆದ ಘರ್ಷಣೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ಆರು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರನ್ನು ಅಖಂಡ ಪ್ರತಾಪ್ ಸಿಂಗ್ (32) ಮತ್ತು ಶಿವರಾಮ್ ಪಾಸಿ (55) ಎಂದು ಗುರುತಿಸಲಾಗಿದೆ. ಜಾಮೊ ಪೊಲೀಸ್ ಠಾಣೆ ವ್ಯಾಪ್ತಿಯ ರೆವ್ರಾಪುರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಎಸ್‌ಎಚ್‌ಒ ಧೀರೇಂದ್ರ ಕುಮಾರ್ ಯಾದವ್ ತಿಳಿಸಿದ್ದಾರೆ.
ಘರ್ಷಣೆಯ ನಂತರ ಜಿಲ್ಲಾ ಮ್ಯಾಜಿಸ್ಟ್ರೇಟ್ ರಾಕೇಶ್ ಕುಮಾರ್ ಮಿಶ್ರಾ ಮತ್ತು ಪೊಲೀಸ್ ವರಿಷ್ಠಾಧಿಕಾರಿ ದಿನೇಶ್ ಗ್ರಾಮಕ್ಕೆ ಬಂದರು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಸ್ತುತ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿಗಳು ಹೇಳಿದರು. ಮೃತ ವ್ಯಕ್ತಿ ಅಖಂಡ ಪ್ರತಾಪ್ ಸಿಂಗ್ ಅವರಿಗೆ ಕ್ರಿಮಿನಲ್ ಹಿನ್ನಲೆಯಿದೆ ಎಂದು ಎಸ್‌ಎಚ್‌ಒ ಹೇಳಿದ್ದಾರೆ.
Two killed, six injured in clash over Holi celebrations in Amethi







