Hubballi | ಒಂದೇ ಗಂಟೆಯಲ್ಲಿ ಎರಡು ಕಡೆ ಚಾಕು ಇರಿತ
ಹುಬ್ಬಳ್ಳಿ : ಹಣಕಾಸಿನ ವಿಚಾರಕ್ಕೆ ಹುಬ್ಬಳ್ಳಿಯಲ್ಲಿ ಒಂದೇ ಗಂಟೆಯಲ್ಲಿ ಎರಡು ಕಡೆ ಚಾಕು ಇರಿತ ಪ್ರಕರಣಗಳು ದಾಖಲಾಗಿವೆ.
ಹಳೆ ಹುಬ್ಬಳ್ಳಿ ಠಾಣೆ ಹಾಗೂ ಕಸಬಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಎರಡು ಘಟನೆಗಳು ನಡೆದಿವೆ.
ಹೆಗ್ಗೆರಿಯ ಸಮ್ಮಾನ್ ಎಂಬಾತನಿಗೆ ಚಾಕು ಇರಿಯಲಾಗಿದೆ.

ಹಳೆ ಹುಬ್ಬಳ್ಳಿ ಇಬ್ರಾಹಿಂ ಪುರದಲ್ಲಿ ಅರ್ಬಾಜ್ ಅಕ್ತರ್ ಎಂಬ ಅಟೋ ಚಾಲಕನಿಗೂ ಚಾಕು ಇರಿಯಲಾಗಿದೆ.
ಅಟೋ ಬಾಡಿಗೆ ಹಾಗೂ ಹಣಕಾಸಿನ ವಿಚಾರಕ್ಕೆ ಗಲಾಟೆ ನಡೆದು ಚಾಕು ಇರಿಯಲಾಗಿದೆ.
ಈ ಎರಡು ಘಟನೆಗಳ ಸಂಬಂಧ ಹಳೆ ಹುಬ್ಬಳ್ಳಿ ಹಾಗೂ ಕಸಬಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.








