ಪ್ಯಾರಿಸ್: ಪ್ಯಾರಿಸ್ ನಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ (Paris 2024 Paralympics) ನಲ್ಲಿ ಭಾರತ ಒಂದೇ ಕ್ರೀಡೆಯಲ್ಲಿ ಎರಡು ಪದಕ ಬೇಟೆಯಾಡಿದೆ.
ಕ್ರೀಡಾಕೂಟ ಆರಂಭವಾದ 2ನೇ ದಿನ ಭಾರತ ಒಂದೇ ಸ್ಪರ್ಧೆಯಲ್ಲಿ 2 ಪದಕ ಗೆದ್ದು, ತನ್ನ ಪದಕ ಬೇಟೆ ಆರಂಭಿಸಿದೆ. ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್ ಎಸ್ಹೆಚ್1 (10m Air Rifle Standing SH1) ವಿಭಾಗದ ಫೈನಲ್ ನಲ್ಲಿ ಶೂಟರ್ ಅವನಿ ಲೇಖರಾ (Avani Lekhara) ಚಿನ್ನದ ಪದಕ ಗೆದ್ದು ಬೀಗಿದರೆ, ಮೋನಾ ಅಗರ್ವಾಲ್ (Mona Agarwal) ಕಂಚಿನ ಪದಕಕ್ಕೆ ಮುತ್ತಿಕ್ಕಿದ್ದಾರೆ.
ಅವನಿ ಲೇಖರಾ ಅವರು ಹಿಂದೆ ಟೋಕಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ದಾಖಲೆಯ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದರು. ಈಗ ಸತತ ಎರಡನೇ ಪದಕ ಗೆದ್ದ ಸಾಧನೆ ಮಾಡಿದ್ದಾರೆ. ಅವನಿ 249.7 ಅಂಕ ಗಳಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟರೆ, ಮೋನಾ ಅಗರ್ವಾಲ್ 228.7 ಅಂಕಗಳೊಂದಿಗೆ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ. ಈ ಬಾರಿಯೂ ಲೇಖರಾ ದಾಖಲೆಯ ಅಂಕ ಗಳಿಸುವುದರ ಮೂಲಕ ಚಿನ್ನ ಗೆದ್ದಿದ್ದಾರೆ. ಇನ್ನು ಎರಡು ಸ್ಪರ್ಧೆಯಲ್ಲಿ ಅವನಿ ಭಾಗವಹಿಸಲಿದ್ದಾರೆ.