ಹಾಸನ: ಲಾಕ್‍ಡೌನ್ ನಂತರ ಪೊಲೀಸ್ ಇಲಾಖೆಯ ನಿದ್ದೆಗೆಡಿಸಿದ್ದ ತಣ್ಣಗಾಗಿದ್ದ ಕೊರೊನಾ ಹಾಸನ ಪೊಲೀಸರ ಪಾಲಿಗೆ ಹೆಮ್ಮಾರಿಯಾಗಿ ಪರಿಣಮಿಸಿದೆ.
ಹಾಸನ ನಗರ ಬಡಾವಣೆ ಠಾಣೆಯ ಎಎಸ್‍ಐ ಬಾಲಕೃಷ್ಣ (59) ಹಾಗೂ ಹಾಸನ ತಾಲೂಕಿನ ಗೊರೂರು ಠಾಣೆಯ ಎಎಸ್‍ಐ. ದೊರೆಸ್ವಾಮಿ(57) ಮೃತಪಟ್ಟ ಪೊಲೀಸ್ ಅಧಿಕಾರಿಗಳು. ಮೃತ ದೊರೆಸ್ವಾಮಿ ಇತ್ತೀಚೆಗೆ ಎಎಸ್‍ಐ ಆಗಿ ಬಡ್ತಿ ಪಡೆದು ಗೊರೂರು ಠಾಣೆಗೆ ವರ್ಗಾವಣೆಗೊಂಡಿದ್ದರು. ಇದಕ್ಕು ಮೊದಲು ಹಾಸನ ಜಿಲ್ಲೆಯ ಅರಕಲಗೂಡು ಪೊಲೀಸ್ ಠಾಣೆ ಮತ್ತು ಅರಸೀಕೆರೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು.

ಮತ್ತೋರ್ವ ಎಎಸ್‍ಐ ಬಾಲಕೃಷ್ಣ ಹಾಸನದ ಗವೇನಹಳ್ಳಿಯವರು. ಇಬ್ಬರಿಗೂ ಕೊರೊನ ಸೋಂಕು ತಗುಲಿದ ನಂತರ ಹಾಸನದ ಹಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಸಾವನಪ್ಪಿದ್ದಾರೆ.
ಹಾಸನ ಜಿಲ್ಲೆಯಲ್ಲಿ ಈವರೆಗೆ ಕೊರೊನಾಗೆ ಯಾರೂ ಪೊಲೀಸರು ಬಲಿಯಾಗಿರಲಿಲ್ಲ. ಆದರೆ, ಈಗ ಇಬ್ಬರು ಬಲಿಯಾಗಿರುವುದು ಆತಂಕ ಸೃಷ್ಟಿಸಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








