ಆಂಧ್ರಪ್ರದೇಶದಲ್ಲಿ ಬೆಳ್ಳಂಬೆಳಿಗ್ಗೆ ಜವರಾಯನ ಅಟ್ಟಹಾಸ
ಆಂಧ್ರಪ್ರದೇಶ : ನೆರೆಯ ಆಂಧ್ರಪ್ರದೇಶದಲ್ಲಿ ಬೆಳ್ಳಂ ಬೆಳಿಗ್ಗೆ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ಎರಡು ಪ್ರತ್ಯೇಕ ಅಪಘಾತದಲ್ಲಿ ಐವರನ್ನು ಜವರಾಯ ಬಲಿ ಪಡೆದುಕೊಂಡಿದ್ದಾನೆ.
ಪೂರ್ವ ಗೋದಾವರಿ ಜಿಲ್ಲೆಯ ರಾವುಲಪಾಲೆಂ ತಾಲೂಕಿನ ಗೋಪಾಲಪುರಂನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದಾರೆ.
ಟೊಮೊಟೊ ತುಂಬಿದ್ದ ವ್ಯಾನ್ ಬೆಳಗಿನ ಜಾವ ರಾಷ್ಟ್ರೀಯ ಹೈವೇಯಲ್ಲಿ ಬೈಕ್ ಗೆ ಡಿಕ್ಕಿ ಹೊಡೆದು ನೆಲಕ್ಕುರುಳಿ ಬಿದ್ದಿದೆ.
ಈ ಅಪಘಾತದಲ್ಲಿ ಬೈಕ್ ಸವಾರ ಕಂಡೆಲ್ಲಿ ಸತೀಶ್ ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದರು.
ಹೆಚ್ಚಾಗ್ತಿದೆ ಬ್ರಿಟನ್ ವೈರಸ್ ಆತಂಕ : ರಾಜ್ಯದಲ್ಲಿ 10 ಮಂದಿಗೆ ಸೋಂಕು
ಅವರಲ್ಲಿ 20 ವರ್ಷದ ಕೊಂಡೇಲಿ ಚಂಟಿ ಆಸ್ಪತ್ರೆ ಸಾಗಿಸುವ ಮಾರ್ಗ ಮಧ್ಯೆ ಪ್ರಾಣ ಬಿಟ್ಟಿದ್ದರೇ ಕೊತ್ತಪೇಟ ತಾಲೂಕಿನ ಕಂಡ್ರಿಗ ಗ್ರಾಮದ ವಂಗಲಪುಡಿ ಸುರೇಂದ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.
ಇದಕ್ಕೂ ಕೆಲ ಗಂಟೆಗಳ ಹಿಂದೆ ವಿಜಯನಗರಂ ಜಿಲ್ಲೆಯ ಸೀತಾನಗರಂ ತಾಲೂಕಿನ ಲಚ್ಚಯ್ಯಪೇಟ ಬಳಿ ಆಟೋ ಮತ್ತು ಲಾರಿ ಮಧ್ಯೆ ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ ಆಟೋ ಚಾಲಕ ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel