ಮಾವೊವಾದಿಗಳ ಕಾರ್ಯಾಚರಣೆಯಲ್ಲಿ ಇಬ್ಬರು ಯೋಧರಿಗೆ ಗಾಯ Saaksha Tv
ಜಾರ್ಖಂಡ್: ಜಾರ್ಖಾಂಡ್ ನಲ್ಲಿ ನಡೆಸಿದ ಕಾರ್ಯಾಚರಣೆ ವೇಳೆ ಸಿಆರ್ ಪಿಎಪ್ ತಂಡದ ಇಬ್ಬರೂ ಯೋಧರು ಗಾಯಗೊಂಡಿದ್ದಾರೆ ಎಂದು ANI ಹೇಳಿದೆ.
ಜಾರ್ಖಂಡ್ ಪೊಲೀಸ್ ಮತ್ತು ಸಿಆರ್‌ಪಿಎಫ್ ತಂಡ ಜಂಟಿಯಾಗಿ ಲೋಹರ್ದಗಾದ ಬುಲ್ಬುಲ್-ಪೆಶ್ರಾರ್ ಪ್ರದೇಶದಲ್ಲಿ ನಡೆಸಿದ ಕಾರ್ಯಾಚರಣೆ ನಡೆಸಿದ್ದರು. ಬುಲ್ಬುಲ್-ಪೆಶ್ರಾರ್ ಪ್ರದೇಶದಲ್ಲಿ ಅಡಗಿದ್ದ ಮಾವೋವಾದಿ ಶಿಬಿರವನ್ನು ನಾಶಪಡಿಸಲು ಐಇಡಿಯನ್ನು ಸ್ಫೋಟಗೊಳಿಸಿದ್ದರು.
ಈ ಸ್ಪೋಟದಲ್ಲಿ ಕೋಬ್ರಾ ಬೆಟಾಲಿಯನ್‌ನ ಇಬ್ಬರು ಯೋಧರು ಗಾಯಗೊಂಡಿದ್ದು, ಅವರನ್ನು ಹೆಲಿಕಾಪ್ಟರ್ ಮೂಲಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಎಂದು ಜಾರ್ಖಂಡ್ ಪೊಲೀಸರು ತಿಳಿಸಿದ್ದಾರೆ.









