ಶಾಲಾ ಬಸ್ ಮುಖಾಮುಖಿ ಡಿಕ್ಕಿ – ಇಬ್ಬರು ವಿದ್ಯಾರ್ಥಿಗಳ ಸಾವು…
ಉತ್ತರ ಪ್ರದೇಶದ ಮುಜಾಫರ್‌ನಗರದಲ್ಲಿ ಎರಡು ಶಾಲಾ ಬಸ್‌ಗಳು ಮುಖಾಮುಖಿ ಡಿಕ್ಕಿ ಹೊಡೆದು ಇಬ್ಬರು ವಿದ್ಯಾರ್ಥಿಗಳು, ಸಹೋದರ ಮತ್ತು ಸಹೋದರಿ ಸಾವನ್ನಪ್ಪಿರು ಘಟನೆ ನಡೆದಿದೆ. ಹಲವು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಯುಪಿ ಪೊಲೀಸರು ತಿಳಿಸಿದ್ದಾರೆ.
ಮೃತಪಟ್ಟವರನ್ನ ಸಮೀರ್ (12) ಮತ್ತು ಅವರ ಸಹೋದರಿ ಮಹಾ (10) ಎಂದು ಗುರುತಿಸಲಾಗಿದೆ, ಇಬ್ಬರೂ ಜಿಡಿ ಗೋಯೆಂಕಾ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳಾಗಿದ್ದಾರೆ. ಸಮೀರ್ 6ನೇ ತರಗತಿಯಲ್ಲಿ ಓದುತ್ತಿದ್ದರೆ, ಮಹಾ 4ನೇ ತರಗತಿ ವಿದ್ಯಾರ್ಥಿನಿಯಾಗಿದ್ದಳು. ಅವರ ಪೋಷಕರು ಇದ್ದ ಇಬ್ಬರು ಮಕ್ಕಳನ್ನ ಕಳೆದುಕೊಂಡಿದ್ದಾರೆ. Two students killed, several injured as school buses collide in UP.
ಕೇಂದ್ರ ಸಚಿವ ಸಂಜೀವ್ ಬಲ್ಯಾನ್ ಅವರು ಸಂತ್ರಸ್ತರ ಕುಟುಂಬಗಳನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು. ಗಾಯಾಳುಗಳು ದಾಖಲಾಗಿರುವ ಮೀರತ್ ಮತ್ತು ಮುಜಾಫರ್‌ನಗರದ ಆಸ್ಪತ್ರೆಗಳಿಗೂ ಅವರು ಭೇಟಿ ನೀಡಿದರು. ಜಿಡಿ ಗೋಯೆಂಕಾ ಪಬ್ಲಿಕ್ ಶಾಲೆಯ ಪ್ರಾಂಶುಪಾಲರಾದ ಸುಲೇಖಾ ಸಿಂಗ್ ಅವರ ದೂರಿನ ಮೇರೆಗೆ ರವೀಂದ್ರನಾಥ್ ಪಬ್ಲಿಕ್ ಶಾಲೆಯ ಬಸ್ ಚಾಲಕ ದೀಪಕ್ ಕುಮಾರ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಜಾಗರೂಕತೆ ಮತ್ತು ಅತಿವೇಗದ ಚಾಲನೆಗಾಗಿ ಕುಮಾರ್ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಆತನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ. ಗುರುವಾರ ರಸ್ತೆ ಅಪಘಾತ ಸಂಭವಿಸಿದೆ. ಮೃತ ವಿದ್ಯಾರ್ಥಿಗಳ ಮೃತದೇಹಗಳು ಜಿಲ್ಲೆಯ ಅವರ ಹುಟ್ಟೂರಾದ ದಢೇಡು ಗ್ರಾಮಕ್ಕೆ ಆಗಮಿಸಿದಾಗ ನೂರಾರು ಜನರು ಅಂತಿಮ ನಮನ ಸಲ್ಲಿಸಲು ಜಮಾಯಿಸಿದರು.








