ಮರಳಿನಲ್ಲಿ ಎರಡು ವರ್ಷದ ಬಾಲಕನ ಶವ ಪತ್ತೆ kalaburagi saaksha tv
ಕಲಬುರಗಿ : ಮರಳಿನಲ್ಲಿ ಎರಡು ವರ್ಷದ ಬಾಲಕನ ಶವ ಪತ್ತೆಯಾಗಿರುವ ಘಟನೆ ನಗರದ ಫಿರ್ದೋಸ್ ನಗರ ಬಡಾವಣೆಯ ಸುಣ್ಣದ ಬಟ್ಟಿಯ ಬಳಿಯ ನಿರ್ಮಾಣ ಹಂತದ ಕಟ್ಟಡದ ಬಳಿ ನಡೆದಿದೆ.
2 ವರ್ಷದ ಮಹ್ಮದ್ ಮುಝಾಮೀಲ್ ಮೃತ ದುರ್ದೈವಿ ಬಾಲಕ ಎಂದು ಗುರುತಿಸಲಾಗಿದೆ.
ಮಹ್ಮದ್ ಮುಝಾಮೀಲ್ ನಿನ್ನೆ ಬೆಳಗ್ಗೆ ಮನೆಯಿಂದ ನಾಪತ್ತೆಯಾಗಿದ್ದನಂತೆ. ಇಂದು ಬೆಳಿಗ್ಗೆ ಮರಳಿನ ಗುಡ್ಡೆಯಿಂದ ಕಾರ್ಮಿಕರು ಮರಳು ತೆಗೆಯುವ ವೇಳೆ ಬಾಲಕನ ಶವ ಪತ್ತೆಯಾಗಿದೆ.
ದುಷ್ಕರ್ಮಿಗಳು ಕೊಲೆ ಮಾಡಿ ಶವ ಬಿಸಾಕಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ವಿಶ್ವವಿದ್ಯಾಲಯ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.









