UAE ನೂತನ ಅಧ್ಯಕ್ಷ ಸ್ಥಾನಕ್ಕೆ ಶೇಖ್ ಮಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಆಯ್ಕೆಯಾಗಿದ್ದಾರೆ.. 31 ವರ್ಷದ ಶೇಖ್ ಮಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಅವರು ಸಂಯುಕ್ತ ಅರಬ್ ಒಕ್ಕೂಟದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಯುಎಇ ಸುಪ್ರೀಂ ಕೌನ್ಸಿಲ್ ಘೋಷಿಸಿದೆ.
ಫೆಡರಲ್ ಸುಪ್ರೀಂ ಕೌನ್ಸಿಲ್ ಇಂದು ನಡೆಸಿದ ಸಭೆಯಲ್ಲಿ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಿದೆ. ಹಿಂದಿನ ಅಧ್ಯಕ್ಷ ಶೇಖ್ ಖಲೀಫಾ ಬಿನ್ ಝಾಯೆದ್ ಅಲ್ ನಹ್ಯಾನ್ 73 ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಝಾಯೆದ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಮುಂದಿನ 5 ವರ್ಷಗಳ ಬಳಿಕ ಇವರು ಅಧಿಕಾರದಲ್ಲಿರಲಿದ್ದಾರೆ.
ನವೆಂಬರ್ 2004ರಿಂದ ಅಬುಧಾಬಿಯ ರಾಜಕುಮಾರನಾಗಿರುವ ಶೇಖ್ ಮಹಮ್ಮದ್ ಬಿನ್ ಝಾಯೆದ್, ಅಬುಧಾಬಿಯ 17ನೇ ದೊರೆಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಶೇಖ್ ಮಹಮ್ಮದ್ ಅವರು ಯುಎಇ ಸೇನಾ ಪಡೆಗಳ ಉಪ ಮುಖ್ಯ ಕಮಾಂಡರ್ ಆಗಿ ಜನವರಿ 2005ರಿಂದ ಸೇವೆ ಸಲ್ಲಿಸುತ್ತಿದ್ದಾರೆ. ಸಂಯುಕ್ತ ಅರಬ್ ಒಕ್ಕೂಟದ ಸೇನಾ ಪಡೆಗಳ ತಂತ್ರಗಾರಿಕೆ, ತರಬೇತಿ ಮತ್ತು ಸಂಘಟನಾ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.