ಭಾವೀ ಪತಿ ಜೊತೆ ಸೇರಿ ಬಾಯ್ ಫ್ರೆಂಡ್ ಒಂದು ಗತಿ ಕಾಣಿಸಿದ ಖತರ್ನಾಕ್ ಲೇಡಿ..!
ಉತ್ತರಪ್ರದೇಶ: ಮಹಿಳೆಯೊಬ್ಬಳು ತನ್ನ ಭಾವೀ ಪತಿಯ ಸಹಾಯ ಪಡೆದು ಮಾಜಿ ಪ್ರಿಯಕರನ ಹತ್ಯೆಗೆ ಸ್ಕೆಚ್ ಹಾಕಿ, ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. 26 ವರ್ಷದ ಯುವಕ ನಿತಿನ್ ಚೌಧರಿ ಹತ್ಯೆಗೀಡಾಗಿದ್ದಾನೆ. ಈತ ಮಹಿಳೆಗೆ ಮದುವೆಯಾಗುವಂತೆ ಪೀಡಿಸುತ್ತಲೇ ಇದ್ದ. ಆದರೆ ಮಹಿಳೆಗೆ ಆಗಲೇ ಬೇರೊಬ್ಬನೊಂದಿಗೆ ವಿವಾಹ ನಿಶ್ಚಯವಾಗಿತ್ತು. ಹೀಗಾಗಿ ಭಾವೀ ಪತಿಯ ಮನವೊಲಿಸಿ ಹಳೇ ಬಾಯ್ ಫ್ರೆಂಡ್ ಕೊಲೆಗೆ ಇಬ್ಬರೂ ಸೇರಿ ಸ್ಕೆಚ್ ಹಾಕಿದ್ದಾರೆ.
40 ವೀರ ಯೋಧರನ್ನ ದೇಶ ಕಳೆದುಕೊಂಡ ಕರಾಳ ದಿನಕ್ಕೆ ಇಂದಿಗೆ 2 ವರ್ಷ..! ವೀರ ಯೋಧರಿಗೊಂದು ಸಲಾಂ..!
ಪ್ಲಾನ್ ಪ್ರಕಾರ ಯುವತಿ ಹಾಗೂ ಆಕೆಯ ಭಾವಿ ಪತಿ ಸನ್ನಿ ನಿತಿನ್ನ್ನು ಪಾರ್ಟಿಯೊಂದಕ್ಕೆ ಆಹ್ವಾನಿಸಿದ್ದಾರೆ. ಆತನಿಗೆ ಬಲವಂತವಾಗಿ ಮದ್ಯಪಾನ ಮಾಡಿಸಿ ಬಳಿಕ ಆತನನ್ನ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಪ್ರಕರಣ ಸಂಬಂಧ 56 ವರ್ಷದ ಆರೋಪಿ ವಿನೋದ್ ಕುಮಾರ್ ಎಂಬಾತನನ್ನ ಪೊಲೀಸರು ಬಂಧಿಸಿದ್ದಾರೆ. ಆದರೆ ಆರೋಪಿ ಮಹಿಳೆ ಹಾಗೂ ಆತನ ಭಾವಿ ಪತಿ ನಾಪತ್ತೆಯಾಗಿದ್ದರು. ಆರೋಪಿಗಳಿಗಾಗಿ ಬಲೆ ಬೀಸಿದ್ದ ಪೊಲೀಸರು ಅವರನ್ನೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹಾವೇರಿ : ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel







