ದೇಶಾದ್ಯಂತ ಆಕ್ರೋಶ ಭುಗಿಲೇಲಿಸಿರುವ ಕನ್ಹಯ್ಯ ಲಾಲ್ ಭೀಕರ ಹತ್ಯೆ ಪ್ರಕರಣ , ದೇಶದ ಜನರ ರಕ್ತ ಕುದಿಯುವಂತೆ ಮಾಡಿದೆ..
ಇಡೀ ದೇಶಾದ್ಯಂತ ಪ್ರತಿಭಟನೆಗಳು ಭುಗಿಲೆದ್ದಿವೆ, ಜಸ್ಟೀಸ್ ಫಾರ್ ಕನ್ಹಯ್ಯ ಲಾಲ್ ಟ್ರೆಂಡ್ ಆಗ್ತಿದೆ..
ಮತ್ತೊಂದೆಡೆ ರಾಜಸ್ಥಾನ ಸರ್ಕಾರ ಕನ್ಹಯ್ಯ ಲಾಲ್ ಕುಟುಂಬಕ್ಕೆ 50 ಲಕ್ಷ ಪರಿಹಾರ ಘೋಷಣೆ ಮಾಡಿದೆ.. ಹೀಗೆ ಇನ್ನೂ ಹಲವೆಡೆಯಿಂದ ಪರಿಹಾರ ಸಿಗುತ್ತಿದೆ..
ಇದೀಗ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹಲೋಟ್ ಅವರು ನನಗೆ ಸರ್ಕಾರಿ ನೌಕರಿಯ ಭರವಸೆ ನೀಡಿದ್ದಾರೆ ಎಂದು ಮೃತ ಕನ್ಹಯ್ಯ ಲಾಲ್ ಅವರ ಮಗ ಯಶ್ ತಿಳಿಸಿದ್ದಾರೆ.
ಮುಖ್ಯಮಂತ್ರಿಯವರೊಂದಿಗೆ ನಾನು ಮಾತನಾಡಿದೆ. ಅವರು ನಮಗೆ ಹಣಕಾಸಿನ ನೆರವು ನೀಡಿದ್ದಾರೆ. ನನಗೆ ಸರ್ಕಾರಿ ನೌಕರಿಯ ಆಶ್ವಾಸನೆ ಕೊಟ್ಟಿದ್ದಾರೆ. ಅವರು ನಮಗೆ ಸಹಕಾರ ನೀಡುತ್ತಿದ್ದಾರೆ. ನಾವೂ ಸಹಕರಿಸುತ್ತಿದ್ದೇವೆ ಎಂದು ಹೇಳಿದ್ದಾರೆ. ಅಲ್ಲದೇ ನಾವು ಭದ್ರತೆ ಕೋರಿದ್ದೇವೆ. ನಮ್ಮ ತಂದೆಯೂ ಭದ್ರತೆ ಕೇಳಿದ್ದರು. ಆದರೆ ಕೊಟ್ಟಿರಲಿಲ್ಲ. ನಮಗೆ ಭದ್ರತೆಯ ಅಗತ್ಯವಿದೆ. ಆ ಬಗ್ಗೆ ಭರವಸೆಯೂ ಸಿಕ್ಕಿದೆ. ಅಪರಾಧಿಗಳಿಗೆ ಮರಣದಂಡನೆಯ ಶಿಕ್ಷೆಯನ್ನೇ ನೀಡಬೇಕು ಎಂದು ಯಶ್ ಆಗ್ರಹಿಸಿದ್ದಾರೆ.








