ಉದಯಪುರದಲ್ಲಿ ದುಷ್ಕರ್ಮಿಗಳಿಂದ ಬರ್ಬರ ಹತ್ಯೆಗೀಡಾಗಿದ್ದ ಮೃತ ಕನ್ಹಯ್ಯಲಾಲ್ ಅವರ ಕುಟುಂಬಕ್ಕೆ ಕಳೆದ 24 ಗಂಟೆಯಲ್ಲಿ ಸುಮಾರು 1 ಕೋಟಿ ರೂಪಾಯಿ ಪರಿಹಾರ ಹರಿದುಬಂದಿದೆ ಎಂದು ಬಿಜೆಪಿ ನಾಯಕ ಕಪಿಲ್ ಮಿಶ್ರಾ ಅವರು ಟ್ವೀಟ್ ಮಾಡಿದ್ದಾರೆ.
‘ಕಣ್ಣೀರನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಎಲ್ಲರಿಗೂ ಧನ್ಯವಾದಗಳು. ಜೈ ಶ್ರೀ ರಾಮ್’ ಎಂದು ಕಪಿಲ್ ಮಿಸ್ರಾ ಟ್ವೀಟ್ ಮಾಡಿದ್ದಾರೆ. ಕನ್ಹಯ್ಯ ಲಾಲ್ ಅವರ ಕುಟುಂಬದ ಜೊತೆಗೆ ಹಿಂದೂಗಳೆಲ್ಲರೂ ನಿಂತಿದ್ದಾರೆ. ಕನ್ಹಯ್ಯ ಲಾಲ್ ಅವರನ್ನು ಕಾಪಾಡಲು ಹೋಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಈಶ್ವರ ಸಿಂಗ್ ಅವರಿಗೆ 25 ಲಕ್ಷ ಕೊಡುತ್ತೇವೆ ಎಂದು ಕಪಿಲ್ ಮಿಶ್ರಾ ಹೇಳಿದ್ದಾರೆ.
ರಾಜಸ್ಥಾನದ ಸರ್ಕಾರವು ಅವರ ಕುಟುಂಬಕ್ಕೆ 50 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ..








